Advertisement

ಸಚಿನ್ ಅಲ್ಲ, ಈತ ಏಷ್ಯಾದ ಅತ್ಯುತ್ತಮ ಆಟಗಾರ: ಮಾಜಿ ಪಾಕ್ ನಾಯಕನ ಹೆಸರು ಸೂಚಿಸಿದ ಸೆಹವಾಗ್

02:20 PM Jun 03, 2023 | Team Udayavani |

ಬೆಂಗಳೂರು: ಭಾರತದ ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಅವರು ಹಲವು ಕ್ರಿಕೆಟ್ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಗೌರವ್ ಕಪೂರ್ ಅವರ ಬ್ರೇಕ್ ಫಾಸ್ಟ್ ವಿದ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಹವಾಗ್, ಏಷ್ಯಾ ಖಂಡದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಆಟಗಾರ ಪಾಕಿಸ್ಥಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಎಂದು ಹೇಳಿದ್ದಾರೆ.

Advertisement

ತನ್ನ ಆಟದ ದಿನಗಳ ಬಗ್ಗೆ ಮೆಲುಕು ಹಾಕಿದ ಸೆಹವಾಗ್, ಪಾಕಿಸ್ತಾನಿ ಆಟಗಾರರ ಜೊತೆಗಿನ ಬಾಂಧವ್ಯದ ಕುರಿತಾಗಿ ಮಾತನಾಡಿದರು.

‘’ನನ್ನ ಪ್ರಕಾರ ಏಷ್ಯಾದಲ್ಲಿ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಎಂದರೆ ಅದು ಇಂಝಮಾಮ್ ಉಲ್ ಹಕ್. 2003-04ರಲ್ಲಿ ಪ್ರತಿ ಓವರ್ ಗೆ 8 ರನ್ ಬೇಕಾದಗಲೂ ಯಾವುದೇ ಚಿಂತೆ ಮಾಡುತ್ತಿರಲಿಲ್ಲ. ಆ ಸಮಯದಲ್ಲಿ ಬೇರೆ ಆಟಗಾರರು ಕಂಗೆಡುತ್ತಿದ್ದರು” ಎಂದು ಸೆಹವಾಗ್ ಹೇಳಿದರು.

ಇದನ್ನೂ ಓದಿ:ಪತ್ನಿಯನ್ನು ಭೇಟಿ ಮಾಡಲು ತಿಹಾರ್ ಜೈಲಿನಿಂದ ತಮ್ಮ ನಿವಾಸಕ್ಕೆ ಬಂದ Manish Sisodia

ಸಚಿನ್ ಅವರು ಬ್ಯಾಟ್ಸಮನ್ ಮಟ್ಟದಿಂದ ಮೇಲಿದ್ದಾರೆ. ಅವರನ್ನು ಇಲ್ಲಿ ಹೋಲಿಕೆ ಮಾಡಲಾಗದು ಎಂದರು.

Advertisement

ಪಾಕಿಸ್ಥಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಅವರು 378 ಏಕದಿನ ಪಂದ್ಯಗಳಿಂದ 11,739 ರನ್ ಮತ್ತು 120 ಟೆಸ್ಟ್ ಪಂದ್ಯಗಳಲ್ಲಿ 8,830 ರನ್ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next