Advertisement

ಭಾರತ- ಪಾಕ್ ಹೋರಾಟ ; ಕೊಹ್ಲಿಯ 60, ಪಾಕಿಸ್ಥಾನಕ್ಕೆ 182 ಗೆಲುವಿನ ಗುರಿ

09:25 PM Sep 04, 2022 | Team Udayavani |

ದುಬೈ: ವಿರಾಟ್ ಕೊಹ್ಲಿ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ಏಷ್ಯಾ ಕಪ್ ಸೂಪರ್-4 ಹಣಾಹಣಿಯಲ್ಲಿ ಪಾಕಿಸ್ಥಾನದ ವಿರುದ್ಧ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 181 ರನ್ ಪ್ರಬಲ ಮೊತ್ತವನ್ನು ದಾಖಲಿಸಿತು.

Advertisement

ಕೊಹ್ಲಿ 44 ಎಸೆತಗಳಲ್ಲಿ 60 ರನ್ ಗಳಿಸಿದರು. ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ 50 ರನ್ ಗಡಿ ದಾಟಿದರು.ಅವರು ಅಂತಿಮವಾಗಿ ರನ್ ಔಟ್ ಆದರು. ಮೊದಲ ಐದು ಓವರ್‌ಗಳಲ್ಲಿ 54 ರನ್ ಕಲೆಹಾಕಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮೊದಲು ಬಲಿಷ್ಠ ಆರಂಭ ನೀಡಿದ್ದರು. ಕೊನೆಯಲ್ಲಿ ರವಿ ಬಿಷ್ಣೋಯ್ ಎರಡು ಪ್ರಮುಖ ಬೌಂಡರಿಗಳನ್ನು ಹೊಡೆದರು.

ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

ಭಾರತ ಅವೇಶ್ ಖಾನ್, ರವೀಂದ್ರ ಜಡೇಜಾ ಮತ್ತು ದಿನೇಶ್ ಕಾರ್ತಿಕ್ ಬದಲಿಗೆ ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಮತ್ತು ದೀಪಕ್ ಹೂಡಾ ಮೂರು ಬದಲಾವಣೆಗಳನ್ನು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next