Advertisement

ಟಿ20 ವಿಶ್ವಕಪ್‌: ವಿರಾಟ್‌ ಕೊಹ್ಲಿ ಸಾವಿರ ರನ್‌ ಸರದಾರ

10:58 PM Oct 30, 2022 | Team Udayavani |

ಪರ್ತ್‌: ರವಿವಾರದ ದಕ್ಷಿಣ ಆಫ್ರಿಕಾ ಎದುರಿನ ಟಿ20 ವಿಶ್ವಕಪ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನೂತನ ಮೈಲುಗಲ್ಲು ನೆಟ್ಟರು. ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಒಂದು ಸಾವಿರ ರನ್‌ ಪೂರ್ತಿಗೊಳಿಸಿದ ವಿಶ್ವದ ಕೇವಲ ದ್ವಿತೀಯ ಹಾಗೂ ಭಾರತದ ಮೊದಲ ಬ್ಯಾಟರ್‌ ಎಂಬ ಹಿರಿಮೆಗೆ ಪಾತ್ರರಾದರು. ಶ್ರೀಲಂಕಾದ ಮಾಹೇಲ ಜಯವರ್ಧನೆ ಮೊದಲ ಸಾಧಕ.

Advertisement

ಸತತ 2 ಅರ್ಧ ಶತಕ ಬಾರಿಸಿ ಮಿಂಚಿದ ವಿರಾಟ್‌ ಕೊಹ್ಲಿ, ದಕ್ಷಿಣ ಆಫ್ರಿಕಾ ಎದುರು ಗಳಿಸಿದ್ದು 12 ರನ್‌ ಮಾತ್ರ. ಅಷ್ಟರಲ್ಲಿ ಸಾವಿರ ರನ್‌ ಸರದಾರನೆನಿಸಿದರು. ಅವರ ಒಟ್ಟು ಗಳಿಕೆಯೀಗ 1,001 ರನ್‌ ಆಗಿದೆ. ಇದು ಅವರ 24ನೇ ಟಿ20 ವಿಶ್ವಕಪ್‌ ಪಂದ್ಯಗಳ 22ನೇ ಇನ್ನಿಂಗ್ಸ್‌. ಸರಾಸರಿ 83.41.

ಮಾಹೇಲ ಜಯವರ್ಧನೆ ಅವ ರೇನೂ ಕೊಹ್ಲಿಗಿಂತ ಭಾರೀ ಮುಂದಿಲ್ಲ. 31 ಪಂದ್ಯಗಳಿಂದ 1,016 ರನ್‌ ಬಾರಿಸಿದ್ದಾರೆ. ಇದೇ ಪಂದ್ಯಾವಳಿ ಯಲ್ಲಿ ವಿರಾಟ್‌ ಕೊಹ್ಲಿ ಲಂಕಾ ಕ್ರಿಕೆಟಿಗನ ದಾಖಲೆ ಮುರಿದು ನೂತನ ಎತ್ತರ ತಲುಪುವುದರಲ್ಲಿ ಅನುಮಾನವಿಲ್ಲ.

919 ರನ್‌ ಮಾಡಿರುವ ರೋಹಿತ್‌ ಶರ್ಮ ಅವರಿಗೆ ತೃತೀಯ ಸ್ಥಾನ. ಅವರೀಗ ಟಿ20 ವಿಶ್ವಕಪ್‌ನಲ್ಲಿ ಸಾವಿರ ರನ್‌ ಬಾರಿಸಿದ ಭಾರತದ ದ್ವಿತೀಯ ಬ್ಯಾಟರ್‌ ಎನಿಸಿಕೊಳ್ಳುವತ್ತ ಮುನ್ನಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next