Advertisement

ಕೊಹ್ಲಿ ಕೌಂಟಿಯಲ್ಲಿ ಆಡುವುದು ಖಚಿತ: ಬಗೆಹರಿದ ಗೊಂದಲ

06:00 AM May 12, 2018 | Team Udayavani |

ಹೊಸದಿಲ್ಲಿ: ವಿರಾಟ್‌ ಕೊಹ್ಲಿ ಅಯರ್‌ಲ್ಯಾಂಡ್‌ ವಿರುದ್ಧ ಟಿ20ಯಲ್ಲಿ ಆಡುತ್ತಾರೋ, ಇಲ್ಲವೋ ಎನ್ನುವ ಗೊಂದಲ ಬಗೆಹರಿದಿದೆ. ಅಂತೂ ಬಿಕ್ಕಟ್ಟಿಗೆ ಒಂದು ತಾತ್ಕಾಲಿಕ ತೇಪೆ ಹಾಕಲಾಗಿದೆ. 

Advertisement

ಲೆಕ್ಕಾಚಾರದ ಪ್ರಕಾರ ಜೂನ್‌ ತಿಂಗಳಿಡೀ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ಕೌಂಟಿಯಲ್ಲಿ ಆಡಬೇಕಿತ್ತು. ಆದರೂ ಜೂನ್‌ ಅಂತ್ಯಕ್ಕೆ ಅಯರ್‌ಲ್ಯಾಂಡ್‌ ವಿರುದ್ಧದ 2 ಟಿ20ಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಎಲ್ಲರ ಹುಬ್ಬೇರಿಸಿತ್ತು. ಈಗಿನ ಬದಲಾವಣೆಗಳ ಪ್ರಕಾರ ಕೊಹ್ಲಿ ಅಯರ್‌ಲ್ಯಾಂಡ್‌ ವಿರುದ್ಧದ ಮೊದಲ ಟಿ20ಗೆ ಗೈರಾಗಲಿದ್ದಾರೆ. ಆದರೆ 2ನೇ ಟಿ20ಯಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಜೂ. 28ಕ್ಕೆ ಅವರ ಕೌಂಟಿ ಪಂದ್ಯ ಮುಗಿಯಲಿದೆ. ಹೀಗಾಗಿ ಜೂ. 29ರಂದು ನಡೆಯುವ ಅಯರ್‌ಲ್ಯಾಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next