Advertisement

ಮೊಟೆರಾ ಸ್ಟೇಡಿಯಂ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ!

08:37 AM Feb 25, 2021 | Team Udayavani |

ಅಹಮದಾಬಾದ್: ಈ ಬೃಹತ್‌ ಸ್ಟೇಡಿಯಂನ ವಾತಾವರಣ ಅದ್ಭುತ ಎಂದು ನಾಯಕ ವಿರಾಟ್‌ ಕೊಹ್ಲಿ ಉದ್ಗಾರ ತೆಗೆದರೂ ಇಲ್ಲಿನ ಎಲ್‌ಇಡಿ ಲೈಟ್‌ ಬಗ್ಗೆ ತುಸು ಆತಂಕ ವ್ಯಕ್ತಪಡಿಸಿದರು. ಕೂಡಲೇ ಇದಕ್ಕೆ ಹೊಂದಿಕೊಳ್ಳಬೇಕಾದ ಅಗತ್ಯವಿದೆ ಎಂದರು.

Advertisement

ಸಾಂಪ್ರಾದಾಯಿಕ ಫ್ಲಡ್‌ಲೈಟ್‌ ಟವರ್‌ಗಳ ಹೈಮಾಸ್ಟ್‌ ದೀಪದ ಬದಲು ಇಲ್ಲಿ ಸ್ಟೇಡಿಯಂ ಛಾವಣಿ ಸುತ್ತ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ವಾತಾವರಣವನ್ನು ತಂಪಾಗಿರಿಸುವುದು ಹಾಗೂ ನೆರಳಿನ ಸಮಸ್ಯೆಯನ್ನು ಹೋಗಲಾಡಿಸುವುದು ಇದರ ಉದ್ದೇಶ. ಆದರೆ ಈ “ರಿಂಗ್‌ ಆಫ್ ಫೈಯರ್‌’ ಮಾದರಿಯ ಲೈಟಿಂಗ್‌ ಕ್ಷೇತ್ರರಕ್ಷಣೆ ನಡೆಸುವಾಗ ಸಮಸ್ಯೆ ತಂದೊಡ್ಡುತ್ತದೆ ಎಂಬುದು ಕೊಹ್ಲಿ ಆತಂಕಕ್ಕೆ ಕಾರಣ.

ದುಬಾೖ ಇಂಟರ್‌ ನ್ಯಾಶನಲ್‌ ಸ್ಟೇಡಿಯಂ ಕೂಡ ಇದೇ ಮಾದರಿಯ ಲೈಟಿಂಗ್‌ ವ್ಯವಸ್ಥೆಯನ್ನು ಹೊಂದಿದೆ. ಕಳೆದ ಐಪಿಎಲ್‌ ವೇಳೆ μàಲ್ಡರ್‌ಗಳು ಬಹಳಷ್ಟು ಕ್ಯಾಚ್‌ ಬಿಡಲು ಇದೂ ಒಂದು ಕಾರಣವಾಗಿತ್ತು. ಈ ಲೈಟ್‌ ಕಣ್ಣು ಕುಕ್ಕಿದ ಬಳಿಕ ಮರಳಿ ಕ್ಷೇತ್ರರಕ್ಷಣೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದರು. ಜತೆಗೆ “ಆರೇಂಜ್‌ ಸೀಟ್ಸ್‌’ ಕೂಡ ರಾತ್ರಿ ವೇಳೆ ದೃಷ್ಟಿಗೆ ಸವಾಲಾಗಿ ಪರಿಣಮಿಸಬಹುದು ಎಂದರು.

ಅಂಪಾಯರ್‌ ಜತೆ ಇಂಗ್ಲೆಂಡಿಗರ ವಾಗ್ವಾದ

ಭಾರತದ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಶುಭಮನ್‌ ಗಿಲ್‌, ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿದರೆಂದು ಇಂಗ್ಲೆಂಡ್‌ ಆಟಗಾರರು ಸಂಭ್ರಮಾಚರಣೆ ನಡೆಸಿದರು. ಅಂಪಾಯರ್‌ ಅನಿಲ್‌ ಚೌಧರಿ ಈ ಮನವಿಯನ್ನು ತೃತೀಯ ಅಂಪಾಯರ್‌ಗೆ ವರ್ಗಾಯಿಸಿದರು. ಅಲ್ಲಿ ನಾಟೌಟ್‌ ತೀರ್ಪು ಬಂತು. ಇದರಿಂದ ಸಿಟ್ಟಾದ ಜೋ ರೂಟ್‌, ಜೇಮ್ಸ್‌ ಆ್ಯಂಡರ್ಸನ್‌, ಸ್ಟುವರ್ಟ್‌ ಬ್ರಾಡ್‌ ಅಂಪಾಯರ್‌ ಚೌಧರಿ ಜತೆ ವಾಗ್ವಾದ ನಡೆಸಿದ್ದು ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next