Advertisement
ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಆರಂಭ ಪಡೆಯಿತು. 50 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿ ಬೃಹತ್ ಗುರಿಯನ್ನು ಕೇನ್ ವಿಲಿಯಮ್ಸನ್ ಪಡೆಯ ಮುಂದಿಟ್ಟಿದೆ. ಆರಂಭದಲ್ಲಿ ಅಬ್ಬರಿಸಿದ ನಾಯಕ ರೋಹಿತ್ ಶರ್ಮ29 ಎಸೆತಗಳಲ್ಲಿ 47 ರನ್ ಗಳಿಸಿ ನಿರ್ಗಮಿಸಿದರು. ಅವರು ತಲಾ 4 ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ್ದರು.
ಗಿಲ್ ಅತ್ಯಮೋಘ ಆಟವಾಡುತ್ತಿದ್ದರು. 65 ಎಸೆತಗಳಲ್ಲಿ 79 ರನ್ ಗಳಿಸಿದ್ದರು. 8 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಕೊಹ್ಲಿ 50 ನೇ ಏಕದಿನ ಕ್ರಿಕೆಟ್ ನ ಸಿಡಿಸಿ ಸಂಭ್ರಮಿಸಿದರು. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲೇ ಅವರ ಹೆಸರಿನಲ್ಲಿದ್ದ ದಾಖಲೆ ಪತನಗೊಳಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.ತಾಳ್ಮೆಯ ಆಟವಾಡಿದ ಕೊಹ್ಲಿ ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ಸಂಭ್ರಮಿಸಿದರು. 49 ಶತಕಗಳನ್ನು ತೆಂಡೂಲ್ಕರ್ ಅವರು ಸಿಡಿಸಿ ಅಗ್ರಗಣ್ಯ ಶತಕಗಳ ಸರದಾರ ಎನಿಸಿಕೊಂಡಿದ್ದರು.ಶತಕ ಸಿಡಿಸಿ ತೆಂಡೂಲ್ಕರ್ ಅವರನ್ನು ಕಂಡು ಸಂಭ್ರಮಿಸಿದರು. ಪ್ರೇಕ್ಷಕರಾಗಿದ್ದ ಸಚಿನ್ ಐತಿಹಾಸಿಕ ದಾಖಲೆಯನ್ನು ಕಂಡು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ಕೊಹ್ಲಿ 113 ಎಸೆತಗಳಲ್ಲಿ117 ರನ್ ಗಳಿಸಿ ಔಟಾದರು.ಸೌಥಿ ಎಸೆದ ಚೆಂಡನ್ನುಕಾನ್ವೇ ಕೈಗಿತ್ತು ನಿರ್ಗಮಿಸಿದರು. 9 ಬೌಂಡರಿ ಮತ್ತು 2 ಆಕರ್ಷಕ ಸಿಕ್ಸರ್ ಸಿಡಿಸಿದರು.
Related Articles
ಇನ್ನೊಂದು ಅತ್ಯಮೋಘ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದರು.70 ಎಸೆತಗಳಲ್ಲಿ 105 ರನ್ ಗಳಿಸಿ ಔಟಾದರು. 4 ಬೌಂಡರಿ ಮತ್ತು 8 ಅಮೋಘ ಸಿಕ್ಸರ್ ಸಿಡಿಸಿದರು. ಇದು ಶ್ರೇಯಸ್ ಅಯ್ಯರ್ ಅವರ ಬ್ಯಾಕ್ ಟು ಬ್ಯಾಕ್ ಶತಕವಾಗಿದೆ.
Advertisement
79 ರನ್ ಗಳಿಸಿದ್ದ ವೇಳೆ ಗಾಯಾಳಾಗಿ ನಿವೃತ್ತಿಯಾಗಿದ್ದ ಗಿಲ್ ಕೊನೆಯಲ್ಲಿ ಮತ್ತೆ ಬ್ಯಾಟಿಂಗ್ ಗೆ ಬಂದರು. 80 ರನ್ ಗಳಿಸಿದ್ದ ಅವರು ಔಟಾಗದೆ ಉಳಿದರು. ಕೆಎಲ್ ರಾಹುಲ್ ಔಟಾಗದೆ 20 ಎಸೆತಗಳಲ್ಲಿ 39 ರನ್ ಗಳಿಸಿದರು.