Advertisement

17 ನೇ ಟೆಸ್ಟ್‌ ಶತಕ ಸಿಡಿಸಿದ ಕೊಹ್ಲಿ, ಲಂಕಾ ಗೆಲುವಿನ ಗುರಿ 550 

10:44 AM Jul 29, 2017 | Team Udayavani |

ಗಾಲೆ: ಇಲ್ಲಿ ಅತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದ 2 ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. 240 ಕ್ಕೆ ಡಿಕ್ಲೇರ್‌ ಮಾಡಿಕೊಂಡ ಭಾರತ ಲಂಕಾ ಗೆಲುವಿಗೆ ಬರೊಬ್ಬರಿ 550 ರನ್‌ಗಳ ಗುರಿಯನ್ನು ಮುಂದಿಟ್ಟಿದೆ. 

Advertisement

2 ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 189 ರನ್‌ಗಳಿಸಿ 498 ರನ್‌ ಮುನ್ನಡೆಯಲ್ಲಿದ್ದ ಭಾರತ ನಾಲ್ಕನೇ ದಿನದಾಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 240 ರನ್‌ಗಳಿಗೆ ಡಿಕ್ಲೇರ್‌ ಮಡಿಕೊಂಡಿತು. 136 ಎಸೆತಗಳಲ್ಲಿ 103 ರನ್‌ಗಳಿಸಿದ ಕೊಹ್ಲಿ ಮತ್ತು 23 ರನ್‌ಗಳಿಸಿದ್ದ ರೆಹಾನೆ ಅಜೇಯರಾಗಿ ಉಳಿದರು.
ಇತ್ತೀಚಿಗಿನ ವರದಿ ಬಂದಾ ಲಂಕಾ ದ್ವಿತೀಯ ಇನ್ನಿಂಗ್ಸ್‌ ನ ಆರಂಭದಲ್ಲಿ ಅಘಾತಕ್ಕೊಳಗಾಗಿದ್ದು, 49 ರನ್‌ಗಳಿಗೆ ಮೊದಲ 2 ವಿಕೆಟ್‌ ಕಳೆದುಕೊಂಡಿದೆ. 

ಸಂಕ್ಷಿಪ್ತ ಸ್ಕೋರ್‌ 
ಭಾರತ ಮೊದಲ ಇನ್ನಿಂಗ್ಸ್‌ 600 ಆಲೌಟ್‌ 
ಶ್ರೀಲಂಕಾ ಮೊದಲ ಇನ್ನಿಂಗ್ಸ್‌ 291 ಆಲೌಟ್‌ 

ಭಾರತ ದ್ವಿತೀಯ ಇನ್ನಿಂಗ್ಸ್‌ 240/3 ಡಿಕ್ಲೇರ್‌ 

Advertisement

Udayavani is now on Telegram. Click here to join our channel and stay updated with the latest news.

Next