Advertisement

ಕೊಹ್ಲಿ “ಅಂಡರ್‌ -19 ವಿಶ್ವಕಪ್‌’ಮೆಲುಕು

06:45 AM Dec 24, 2017 | |

ಹೊಸದಿಲ್ಲಿ:  ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿ ತನ್ನ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

Advertisement

“2008ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿ ನನಗೆ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಮತ್ತು ಕ್ರಿಕೆಟ್‌ ರಂಗದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು. ಹಾಗಾಗಿಯೇ ಆ ಪಂದ್ಯ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ’ ಎಂದು ಕೊಹ್ಲಿ ಮೆಲುಕು ಹಾಕಿದರು.

ಅಂಡರ್‌-19ವಿಶ್ವಕಪ್‌ ಸಂದರ್ಭದ ಕೆಲವು ಕ್ಷಣಗಳನ್ನು ಸ್ಮರಿಸಿಕೊಂಡ ಕೊಹ್ಲಿ, ಆಗಿನ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನೂ ಹೆಸರಿಸಿದರು. “ಅಂಡರ್‌-19 ವಿಶ್ವಕಪ್‌ ಅವಧಿಯ ಆಟಗಾರರಲ್ಲಿ ನಾವು ಮೂರು ಮಂದಿಯಷ್ಟೇ ಈಗ ರಾಷ್ಟ್ರೀಯ ತಂಡದ  ನಾಯಕರಾಗಿರಬಹುದು, ಅದಕ್ಕೂ ಹೆಚ್ಚಾಗಿ ಅಂದಿನ ಕೂಟದ ಬಹುತೇಕ ಆಟಗಾರರು ರಾಷ್ಟ್ರೀಯ ತಂಡಗಳಲ್ಲಿ ಆಡುತ್ತಿದ್ದಾರೆ ಎನ್ನುವುದು ಸಂತಸದ ಸಂಗತಿ’ ಎಂದರು.

2008ರಲ್ಲಿ  ಮಲೇಶ್ಯದಲ್ಲಿ ನಡೆದ ಅಂಡರ್‌-19ನೇ ವಿಶ್ವಕಪ್‌ ಫೈನಲ್‌ನಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಡಿ-ಎಲ್‌ ನಿಯಮದಂತೆ 12 ರನ್ನುಗಳಿಂದ ಮಣಿಸಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next