Advertisement

ಟ್ರಾಫಿಕ್‌ ದಂಡದ ಬಳಿಕ ವಿಶ್ವದ ಶ್ರೀಮಂತ ಕ್ರಿಕೆಟ್‌ಗನ ಸ್ಥಿತಿ !

11:12 AM Sep 07, 2019 | Sriram |

ಯಾರು ಬೇಕಾದರೂ ತಮಾಷೆ ಮಾಡಬಹುದು, ಯಾರು ಬೇಕಾದರೂ ತಮಾಷೆಗೆ ವಸ್ತುವಾಗಬಹುದು. ಸಾಮಾಜಿಕ ತಾಣಗಳು ಬಂದಮೇಲಂತೂ ಹಾಸ್ಯ ಮಾಡುವುದು, ಅಪಹಾಸ್ಯ ಮಾಡುವುದು, ಕಡೆಗೆ ವೈಯಕ್ತಿಕ ನಿಂದನೆ ಮಾಡುವುದು ಎಗ್ಗುಸಿಗ್ಗಿಲ್ಲದೇ ನಡೆಯುತ್ತಿದೆ. ಈಗ ಸಾಮಾಜಿಕ ತಾಣಗಳಲ್ಲಿ ಹಾಸ್ಯಕ್ಕೊಳಗಾಗುವ ಸರದಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯದ್ದು.

Advertisement

ಸದ್ಯಕ್ಕೆ ಇದೆಲ್ಲ ಸದಭಿರುಚಿಯದ್ದು ಎನ್ನುವುದು ಸಮಾಧಾನಕರ ಸಂಗತಿ. ಆಗಿದ್ದಿಷ್ಟೇ: ಕೊಹ್ಲಿ ಗುರುವಾರ ಟ್ವೀಟರ್‌ನಲ್ಲಿ ಅಂಗಿಯಿಲ್ಲದೇ, ಬರಿಯ ಚೆಡ್ಡಿಯಲ್ಲಿ ಬೀದಿಯೊಂದರಲ್ಲಿ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ನಮ್ಮ ಹೊರಗೆ ನೋಡುವುದಕ್ಕಿಂತ ನಮ್ಮೊಳಗೆ ನೋಡಿಕೊಂಡರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಯೊಬ್ಬರು, ವಿಶ್ವದ ಶ್ರೀಮಂತ ಕ್ರಿಕೆಟಿಗನಿಗೆ ಟ್ರಾಫಿಕ್‌ ದಂಡಕ್ಕೊಳಗಾದ ನಂತರ ಬಂದಸ್ಥಿತಿಯಿದು ಎಂದು ಹಾಸ್ಯ ಮಾಡಿದ್ದಾರೆ.

ಇನ್ನೊಬ್ಬರೂ, ಟ್ರಾಫಿಕ್‌ ದಂಡ ಹಾಕಿಸಿಕೊಂಡ ಮೇಲೆ ನಮಗೂ ಹೀಗೆ ಆಗಬಹುದು ಎಂದು ವಿಡಂಬಿಸಿದ್ದಾರೆ. ಜನರು ಟ್ರಾಫಿಕ್‌ ದಂಡನೆಯನ್ನೇ ತಮ್ಮ ಹಾಸ್ಯಕ್ಕೆ ವಸ್ತುವಾಗಿಸಿಕೊಳ್ಳಲು ಕಾರಣ ಇತ್ತೀಚೆಗೆ ಕೇಂದ್ರಸರ್ಕಾರ ಜಾರಿ ಮಾಡಿರುವ ಹೊಸ ಸಂಚಾರಿನಿಯಮ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ಹೇರುತ್ತಿರುವುದರಿಂದ ಜನ ತಮ್ಮ ಸೃಜನಶೀಲತೆ ಹಾಗೂ ಸಿಟ್ಟನ್ನು ಪ್ರಕಟಿಸಲು ಇದನ್ನೇ ಬಳಸಿಕೊಳ್ಳುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next