Advertisement

ಟ್ವೀಟರ್‌ನಲ್ಲಿ ಕೊಹ್ಲಿ ಈಗ ತಮಾಷೆಯ ವಸ್ತು..!

03:45 AM Jun 25, 2017 | |

ನವದೆಹಲಿ: ಚಾಂಪಿಯನ್ಸ್‌ ಟ್ರೋಫಿನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲಿನ ಬಿಸಿ ಇನ್ನೂ ತಣ್ಣಗಾದಂತಿಲ್ಲ. ಕೊಹ್ಲಿ ಮಾಡಿಕೊಂಡಿರುವ ಕುಂಬ್ಳೆ ಜತೆಗಿನ ವಿವಾದವೂ ಬಿಸಿತುಪ್ಪದಂತಿದೆ. 

Advertisement

ಸದ್ಯ ನಾಯಕ ವಿರಾಟ್‌ ಕೊಹ್ಲಿ ಎಲ್ಲವನ್ನೂ ಮರೆತು ವಿಂಡೀಸ್‌ನಲ್ಲಿ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿರಬಹುದು. ಆದರೆ ಅಭಿಮಾನಿಗಳು ಮಹಾ ಸೋಲಿನ ಅವಮಾನವನ್ನು ಇನ್ನೂ ಮರೆತ್ತಿಲ್ಲ ಎನ್ನುವುದು ಅಷ್ಟೇ ನಿಜ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಸಿಗಬೇಕೆಂದರೆ ನೀವು ಟ್ವೀಟರ್‌ಗೆ ಹೋಗಲೇಬೇಕು. ಹೌದು, ಅಲ್ಲಿ ಕೊಹ್ಲಿ ಫೋಟೋವೊಂದನ್ನು ತಮಾಷೆಯಾಗಿ ಬಳಸಲಾಗಿದೆ. 

ವಿಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಗೆ ರದ್ದಾದ ಸಂದರ್ಭದಲ್ಲಿ ಅಭಿಮಾನಿಗಳು ಈ ಫೋಟೋ ಬಳಸಿಕೊಂಡು ವ್ಯಂಗ್ಯವಾಡಿದ್ದಾರೆ. ಇದು ಆಸೀಸ್‌ ವಿರುದ್ಧ ಚಾಂಪಿಯನ್ಸ್‌ ಟ್ರೋಫಿ ಪಂದ್ಯದ ಟೀವಿ ಸ್ಕ್ರೀನ್‌ ಶಾಟ್‌. ಕೊಹ್ಲಿ ಡ್ರೆಸಿಂಗ್‌ ರೂಮ್‌ ಒಳಗಡೆಯ ಕಿಂಡಿಯೊಂದರಲ್ಲಿ ಇಣುಕು ದೃಶ್ಯ. ಇದನ್ನು ಉಪಯೋಗಿಸಿ ಬಗೆ ಬಗೆಯ ಜೋಕ್‌ಗಳನ್ನು ಅಭಿಮಾನಿಗಳು ರಸವತ್ತಾಗಿ ಚರ್ಚಿಸಿದ್ದಾರೆ. “ಒಳಗೆ ಅನುಷ್ಕಾ ಇದ್ದಾರಾ?’, “ಕುಂಬ್ಳೆ ಬರುತ್ತಿದ್ದಾರೆ ಟೀವಿ ಬಂದ್‌ ಮಾಡಿ’, “ಜಡೇಜಾ ಬೇಗ  ಬಾ ಪಾಂಡ್ಯ ಯಾಕೋ ಮಾತನಾಡುತ್ತಿಲ್ಲ’ ಎಂಬಿತ್ಯಾದಿ ಜೋಕ್‌ಗಳನ್ನು ಕೊಹ್ಲಿಯೇ ಹೇಳುತ್ತಿರುವ ರೀತಿಯಲ್ಲಿ ಅಭಿಮಾನಿಗಳು ಕಥೆ ಕಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next