ಕ್ಯಾಲಿಫೋರ್ನಿಯಾ: ಅಂತರ್ಜಾಲ ಸರ್ಚ್ ಇಂಜಿನ್ ಗೂಗಲ್ ಗೆ ಇದೀಗ 25ರ ಹರೆಯ. ಎರಡುವರೆ ದಶಕಗಳ ಹಿಂದೆ ಆರಂಭವಾದ ಗೂಗಲ್ ಇದೀಗ ಅತಿ ದೊಡ್ಡ ಸಂಸ್ಥೆಯಾಗಿ ಬೆಳದಿದೆ. 25ರ ಸಂಭ್ರಮದಲ್ಲಿರುವ ಗೂಗಲ್ ಇದೀಗ ಅತಿ ಹೆಚ್ಚು ಹುಡುಕಲ್ಪಟ್ಟವರ ಬಗ್ಗೆ ಬೆಳಕು ಚೆಲ್ಲಿದೆ.
25 ವರ್ಷದ ಗೂಗಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕ್ರಿಕೆಟಿಗ ಎಂದರೆ ಅದು ಭಾರತದ ವಿರಾಟ್ ಕೊಹ್ಲಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಅವರು ಈ ವಿಚಾರದಲ್ಲಿಯೂ ಎಲ್ಲಾ ಕ್ರಿಕೆಟಿಗರಿಗಿಂತ ಮುಂದಿದ್ದಾರೆ.
ಆದರೆ ಅತೀ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟು ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಸ್ಥಾನ ಪಡೆದಿದ್ದಾರೆ. 38ರ ಹರೆಯದಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿರುವ ಸದ್ಯ ಅಲ್ ನಾಸರ್ ತಂಡದ ಸದಸ್ಯ ರೊನಾಲ್ಡೊ 25 ವರ್ಷದ ಗೂಗಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕ್ರೀಡಾಪಟುವಾಗಿದ್ದಾರೆ. ಅವರು ಈ ವಿಚಾರದಲ್ಲಿ ಮತ್ತೋರ್ವ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರನ್ನು ಮೀರಿಸಿದ್ದಾರೆ.
ಅತೀ ಹೆಚ್ಚು ಹುಡುಕಲ್ಪಟ್ಟ ಕ್ರೀಡೆ ವಿಚಾರದಲ್ಲಿ ಫುಟ್ ಬಾಲ್ ಸ್ಥಾನ ಪಡೆದಿದೆ.