Advertisement
ಭಾರತದ ಧ್ವಜ ಹಾರಿಸಿ ಜೈಲು ಪಾಲುಕೊಹ್ಲಿಗೆ ಪಾಕಿಸ್ತಾನದಲ್ಲಿ ಯಾವ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅದು 2016 ಜನವರಿಯಲ್ಲಿ ನಡೆದ ಘಟನೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಕೊಹ್ಲಿ 90 ರನ್ ಬಾರಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದ ಪಾಕ್‌ನ ಉಮರ್ ದ್ರಾಜ್ ಕುಣಿದು ಕುಪ್ಪಳಿಸಿ ಭಾರತದ ಧ್ವಜವನ್ನು ತನ್ನ ಮನೆ ಮೇಲೆ ಹಾರಿಸಿ ಬಿಟ್ಟ. ನಂತರ ಆತ ಜೈಲಿಗೆ ಹೋಗ್ಬೇಕಾಯ್ತು. ಕೋರ್ಟ್ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಅಂತಿಮವಾಗಿ ಆತ ಕೊಹ್ಲಿ ಮೇಲಿನ ಅಭಿಮಾನದಿಂದ ಭಾರತದ ಧ್ವಜ ಹಾರಿಸಿದ ಅಮಾಯಕ ಎಂಬುದು ಸಾಬೀತಾದ ಮೇಲೆ ಷರತ್ತಿನ ಮೇಲೆ ಬಿಡುಗಡೆಯ ಭಾಗ್ಯ ಸಿಕು¤.
ಪ್ರತಿವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿದ ಬೇರೆ ಬೇರೆ ಕ್ಷೇತ್ರದ ಸಾಧಕರ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡುತ್ತದೆ. ಅದೇ ರೀತಿ ಪ್ರಸಕ್ತ ವರ್ಷದಲ್ಲಿ ಪಾಕಿಸ್ತಾನದಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿದ ಕ್ರೀಡಾಪಟುಗಳ ಪಟ್ಟಿ ಬಿಡುಗಡೆ ಆಗಿದೆ. ಅಚ್ಚರಿ ಅಂದರೆ ನಂ.1ನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಸ್ವತಃ ಪಾಕಿಸ್ತಾನದ ಕ್ರಿಕೆಟಿಗರನ್ನು ಅವರದೇ ನೆಲದಲ್ಲಿ ಹಿಮ್ಮೆಟ್ಟಿಸಿದ ಖ್ಯಾತಿ ಕೊಹ್ಲಿ ಅವರದು. ಮಿಸ್ ಯೂ ಕೊಹ್ಲಿ ಕೂಗು
2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಲಾಹೋರ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಆ ನಂತರ ಪಾಕ್ ಪ್ರವಾಸ ಹೋಗಲು ಇತರೆ ರಾಷ್ಟ್ರಗಳು ಹಿಂದೇಟು ಹಾಕುತ್ತವೆ. ಹೀಗಾಗಿ ಸುಮಾರು 8 ವರ್ಷಗಳಿಂದ ಅಲ್ಲಿ ಅಂತಾರಾಷ್ಟ್ರೀಯ ಪಂದ್ಯವೇ ನಡೆದಿರಲಿಲ್ಲ. ಈ ಬಾರಿ ಪಾಕ್ ಕ್ರಿಕೆಟ್ ಮಂಡಳಿ ಪ್ರಯತ್ನಪಟ್ಟು ಟಿ20 ವಿಶ್ವ ಇಲೆವೆನ್ ಟೂರ್ನಿಯನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ವಿಶ್ವ ಇಲೆವೆನ್ ತಂಡದಲ್ಲಿ ಭಾರತದ ಯಾವ ಆಟಗಾರರು ಆಡಿರಲಿಲ್ಲ. ಪಂದ್ಯ ನೋಡಲು ಬಂದ ಪಾಕ್ ಅಭಿಮಾನಿಗಳು “ಮಿಸ್ ಯೂ ಕೊಹ್ಲಿ’ ಎಂದು ಬ್ಯಾನರ್ ಹಿಡಿದು ನಿಂತಿದ್ದರು. ಕೊಹ್ಲಿ ಆಡಬೇಕಿತ್ತು ಅಂಥ ಕೂಗನ್ನು ಸಾಮಾಜಿಕ ಜಾಲತಾಣದಲ್ಲಿ ಎಬ್ಬಿಸಿದ್ದರು.
Related Articles
Advertisement
ಆಟಗಾರರೇ ಅಭಿಮಾನಿಗಳು ಕೊಹ್ಲಿಗೆ ಪಾಕ್ ತಂಡದಲ್ಲಿಯೇ ಅಭಿಮಾನಿಗಳ ವರ್ಗವಿದೆ. ಅದರಲ್ಲಿಯೂ 2017 ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹೀರೋ ಮೊಹಮ್ಮದ್ ಅಮೀರ್ ತಾನು ಕೊಹ್ಲಿಯ ದೊಡ್ಡ ಅಭಿಮಾನಿ, ಅವರಿಗೆ ಬೌಲಿಂಗ್ ಮಾಡುವುದನ್ನೇ ಸದಾ ಎದುರುನೋಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸಫ್ರಾìಜ್ ಸೇರಿದಂತೆ ಅನೇಕರು ಕೊಹ್ಲಿ ಗುಣಗಾನ ಮಾಡುತ್ತನೇ ಇರುತ್ತಾರೆ
ಕೊಹ್ಲಿ ಮೇಲೆ ಈ ಮಟ್ಟದಅಭಿಮಾನ ?
ಕ್ರೀಡೆ, ಕಲೆಗೆ ಎಲ್ಲೆ ಇಲ್ಲ ಅನ್ನುವುದು ನಿಜ. ಆದರೆ ಕೊಹ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಪಾಕ್‌ನಲ್ಲಿ ಹೊಂದಿರಲು ಕಾರಣ ಏನು ಅನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆಲ್ಲ ಕಾರಣ ಒಂದು ಕೊಹ್ಲಿಯ ಅದ್ಭುತ ಆಟ. ಮತ್ತೂಂದು ಪಾಕ್ ಆಟಗಾರರ ಜತೆ ಕೊಹ್ಲಿ ಉತ್ತಮ ಸಂಬಂಧ ಹೊಂದಿರುವುದು. ಕಳೆದ ವರ್ಷ ಪಾಕ್‌ನ ಸ್ಫೋಟಕ ಆಟಗಾರ ಶಾಹಿದ್ ಅಫ್ರಿದಿ ನಿವೃತ್ತಿಯಾಗಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಭಾರತದ ಆಟಗಾರರ ಹಸ್ತಾಕ್ಷರ ಉಳ್ಳ ತನ್ನ ಜೆರ್ಸಿಯನ್ನು ಅಫ್ರಿದಿಗೆ ಕಳುಹಿಸಿದ್ದರು. ಆ ಶರ್ಟ್ ಅನ್ನು ಅಫ್ರಿ ದಿ ಟ್ವೀಟರ್‌ಗೆ ಹಾಕಿದ್ದರು. ಇದು ಕೂಡ ಅಲ್ಲಿಯ ಕ್ರೀಡಾಭಿಮಾನಿಗಳ ಮನಸ್ಸು ಗೆದ್ದಿತ್ತು. ಒಮ್ಮೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಟ್ವೀಟರ್‌ನಲ್ಲಿ ಉತ್ತರಿಸಿದ ಕೊಹ್ಲಿ, ತಾನು ಎದುರಿಸಿದ ಕಠಿಣ ಬೌಲರ್ ಮೊಹಮ್ಮದ್ ಅಮೀರ್ ಅಂದಿದ್ದರು. ಹೀಗಾಗಿ ಆಗಾಗ ಪಾಕ್ ಆಟಗಾರರನ್ನು ಕೊಹ್ಲಿ ಹೊಗಳುವುದು ಅಲ್ಲಿಯ ಅಭಿಮಾನಿಗಳಿಗೆ ಕೊಹ್ಲಿ ಮೇಲೆ ಅಭಿಮಾನ ಚಿಮ್ಮಿಸುತ್ತಿದೆ.
ಮಂಜು ಮಳಗುಳಿ