Advertisement

ವಿರಾಟ್‌ ಕೊಹ್ಲಿಯೇ ಸಾಕು, ಪ್ರತ್ಯೇಕ ನಾಯಕರು ಬೇಕಿಲ್ಲ: ಮಂಜ್ರೇಕರ್‌

10:55 PM Jun 19, 2020 | Sriram |

ಮುಂಬಯಿ: ನಾಯಕ ವಿರಾಟ್‌ ಕೊಹ್ಲಿ ಮೂರೂ ಮಾದರಿಗಳಲ್ಲಿ ಅಮೋಘ ನಾಯಕತ್ವ ಪ್ರದ ರ್ಶಿಸುತ್ತಿರುವುದರಿಂದ ಭಾರತದ ಕ್ರಿಕೆಟ್‌ ತಂಡಗಳಿಗೆ ಸದ್ಯ ಪ್ರತ್ಯೇಕ ನಾಯಕರ ಅಗತ್ಯವಿಲ್ಲ ಎಂದು ಮಾಜಿ ಆಟಗಾರ ಸಂಜಯ್‌ ಮಂಜ್ರೇಕರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಯಾವುದೇ ತಂಡವಿರಲಿ, ನಾಯಕನೊಬ್ಬ ಎಲ್ಲ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿ ಉತ್ತಮ ಹಾಗೂ ಪರಿಣಾಮಕಾರಿ ನಿರ್ವಹಣೆ ತೋರುತ್ತಿದ್ದರೆ ಅಲ್ಲಿ ಪ್ರತ್ಯೇಕ ನಾಯಕರ ಅಗತ್ಯ ಖಂಡಿತ ಕಂಡುಬರದು. ಇಲ್ಲಿ ಆತನ ಫಾರ್ಮ್ ಕೂಡ ನಿರ್ಣಾಯಕ. ಸದ್ಯ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಅವರ ನಾಯಕತ್ವದ ದಾಖಲೆ ಅತ್ಯುತ್ತಮವಾಗಿದೆ. ಆದರೆ ಭವಿಷ್ಯದಲ್ಲಿ ಭಾರತ ಮೂರು ಕ್ರಿಕೆಟ್‌ ನಾಯಕರನ್ನು ಕಾಣಲೂಬಹುದು’ ಎಂಬುದಾಗಿ ಸಂಜಯ್‌ ಮಂಜ್ರೇಕರ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next