Advertisement

ಕೊಹ್ಲಿ ಕ್ರಿಕೆಟಿನ ರೊನಾಲ್ಡೊ: ಲಾರಾ ಗುಣಗಾನ

10:01 AM Dec 18, 2019 | Team Udayavani |

ಆಟದ ಬದ್ಧತೆಯಲ್ಲಿ ಕ್ರಿಕೆಟ್‌ನ ವಿರಾಟ್‌ ಕೊಹ್ಲಿ ಮತ್ತು ಫ‌ುಟ್‌ಬಾಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಸರಿಸಮಾನರು; ಕೊಹ್ಲಿ ಕ್ರಿಕೆಟಿನ ರೊನಾಲ್ಡೊ ಎಂಬುದಾಗಿ ಕ್ರಿಕೆಟ್‌ ದಂತಕತೆ ಬ್ರಿಯಾನ್‌ ಲಾರಾ ಅಭಿಪ್ರಾಯ ಪಟ್ಟಿ¨ªಾರೆ.
ಖಾಸಗಿ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಲಾರಾ, “ಕೆ.ಎಲ್‌. ರಾಹುಲ್‌ ಪ್ರತಿಭೆಯಲ್ಲಿ ವಿರಾಟ್‌ ಕೊಹ್ಲಿಗೆ ಸಮನಿರಬಹುದು. ಆದರೆ ಕೊಹ್ಲಿಗಿರುವ ಆಟದ ಕುರಿತಾದ ಬದ್ಧತೆ, ಪರಿಶ್ರಮ ಮತ್ತು ತಯಾರಿ ಎನ್ನುವುದು ಅವರನ್ನು ಮತ್ತೂಂದು ಮಜಲಿಗೆ ಕೊಂಡೊಯ್ದಿದೆ’ ಎಂದು ಗುಣಗಾನ ಮಾಡಿದರು.

Advertisement

ಸೋಬರ್ ಜತೆ ಹೋಲಿಕೆ
ಕೊಹ್ಲಿಯನ್ನು ಗ್ಯಾರಿ ಸೋಬರ್ಗೆ ಹೋಲಿಕೆ ಮಾಡಿದ ಲಾರಾ, “ಇವರಿಬ್ಬರು ಕ್ರಿಕೆಟಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರು. ಬ್ಯಾಟಿಂಗನ್ನು ನಂಬಲು ಅಸಾಧ್ಯವಾದ ಮಟ್ಟಕ್ಕೆ ಒಯ್ದಿರುವ ಕೊಹ್ಲಿಯ ಸಾಮರ್ಥ್ಯವನ್ನು ನೋಡುವಾಗ ಆಶ್ಚರ್ಯವಾಗುತ್ತದೆ.

ವಿರಾಟ್‌ ಕೊಹ್ಲಿ ಅವರ ದೈಹಿಕ ಮತ್ತು ಮಾನಸಿಕ ಶಕ್ತಿ ನಂಬಲಸಾಧ್ಯ. ಯಾವುದೇ ಕಾಲದ ಶ್ರೇಷ್ಠ ತಂಡಗಳಲ್ಲಿ ಇವರು ಯಾವುದೇ ಅನುಮಾನವಿಲ್ಲದೆ ಜಾಗ ಪಡೆಯುತ್ತಾರೆ. ಆಟಗಾರನೊಬ್ಬ ಕ್ರಿಕೆಟಿನ ಎಲ್ಲ ಆವೃತ್ತಿಗಳಲ್ಲಿ ಶೇ. 50 ಸರಾಸರಿ ಹೊಂದುತ್ತಾನೆ ಎಂದಾದರೆ ಇದು ಅದ್ಭುತವೇ ಸರಿ’ ಎಂದು ಲಾರಾ ಟೀಮ್‌ ಇಂಡಿಯಾ ಕಪ್ತಾನನ ಬಗ್ಗೆ ಹೊಗಳಿಕೆಯ ಸುರಿಮಳೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next