ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ಯಾಪ್ ನೀಡಿ ಸ್ವಾಗತಿಸಿದ್ದಾರೆ.
Advertisement
ಬುಮ್ರಾ ಇಲ್ಲಿಯವರೆಗೆ 31 ಏಕದಿನ ಮತ್ತು 32 ಟ್ವೆಂಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನಲ್ಲಿ 56 ವಿಕೆಟ್, ಟಿ20ಯಲ್ಲಿ 40 ವಿಕೆಟ್ ಪಡೆದಿದ್ದಾರೆ. ಟ್ವೆಂಟಿ20ಯಲ್ಲಿ ಭಾರತ ಹಲವು ಪಂದ್ಯಗಳಲ್ಲಿ ಗೆಲುವು ದಾಖಲಿಸಲು ಬುಮ್ರಾ ಕಾರಣರಾಗಿದ್ದರು. ಆದರೆ ಇಲ್ಲಿಯವರೆಗೆ ಬುಮ್ರಾ ಅವರಿಗೆ ಟೆಸ್ಟ್‌ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಬುಮ್ರಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಪಂದ್ಯಕ್ಕೆ ವೇಗಿಗಳಾದ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ.