ಹೊಸದಿಲ್ಲಿ: ಮಧ್ಯಪ್ರದೇಶ ಕ್ರಿಕೆಟ್ ಮಂಡಳಿಯ ಸದಸ್ಯ ಸಂಜೀವ್ ಗುಪ್ತಾ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ್ದಾರೆ.
ಕೊಹ್ಲಿ ಏಕಕಾಲದಲ್ಲಿ ಎರಡು ಹುದ್ದೆ ನಿಭಾಯಿಸುತ್ತಿದ್ದಾರೆ ಎನ್ನುವುದು ಅವರ ಆರೋಪ.
ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವದ ಜತೆಗೆ ಸಾಹಸೋದ್ಯಮ ಸಂಸ್ಥೆಯೊಂದರ ನಿರ್ದೇಶಕರಾಗಿಯೂ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಗುಪ್ತಾ ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ.
ಬಿಸಿಸಿಐ ನೈತಿಕ ಅಧಿಕಾರಿ ಡಿ.ಕೆ. ಜೈನ್ ರವಿವಾರ ಇದನ್ನು ಖಚಿತಪಡಿಸಿದ್ದು, ದೂರನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಸಂಜೀವ್ ಗುಪ್ತಾ ಇದಕ್ಕೂ ಮೊದಲು ಸಾಕಷ್ಟು ಮಂದಿಯ ವಿರುದ್ಧ ಇಂಥದೇ ದೂರು ದಾಖಲಿಸಿರುತ್ತಾರೆ.