Advertisement

ಹ್ಯಾಮಿಲ್ಟನ್ ಟಿ 20: ನಾಯಕನಾಗಿ ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ

08:29 AM Jan 30, 2020 | keerthan |

ಹ್ಯಾಮಿಲ್ಟನ್: ಇಲ್ಲಿನ ಸೆಡ್ಡಾನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.

Advertisement

ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಸಾಧನೆ ಮಾಡಿದರು. ಈ ಹಿಂದೆ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿತ್ತು.

ಹ್ಯಾಮಿಲ್ಟನ್ ಪಂದ್ಯಕ್ಕೂ ಮುನ್ನ ಧೋನಿಯ ಈ ದಾಖಲೆ ಮುರಿಯಲು ಕೊಹ್ಲಿಗೆ 25 ರನ್ ಗಳ ಅಗತ್ಯವಿತ್ತು. ಇಂದಿನ ಪಂದ್ಯದಲ್ಲಿ 38 ರನ್ ಗಳಿಸಿದ ಕೊಹ್ಲಿ ಧೋನಿ ದಾಖಲೆ ಮುರಿದರು.

ಧೋನಿ 72 ಅಂತಾರಾಷ್ಟ್ರೀಯ ಪಂದ್ಯಗಳಿಂದ 1112 ರನ್ ಗಳಿಸಿದ್ದಾರೆ. ಕೊಹ್ಲಿ ನಾಯಕನಾಗಿ ಟಿ20 ಪಂದ್ಯಗಳಲ್ಲಿ ಸದ್ಯ 1126 ರನ್ ಹೊಡೆದಿದ್ದಾರೆ. ಇದಕ್ಕಾಗಿ ಕೊಹ್ಲಿ ಬಳಸಿರುವುದು ಕೇವಲ 37 ಪಂದ್ಯಗಳು ಮಾತ್ರ.

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಐದು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next