Advertisement

ವಿಂಡೀಸ್‌ ಸರಣಿಗೆ ಕೊಹ್ಲಿ-ಬುಮ್ರಾಗೆ ವಿಶ್ರಾಂತಿ

11:49 PM Jun 23, 2019 | Team Udayavani |

ಮುಂಬಯಿ: ಬಿಡುವಿಲ್ಲದೆ ಕ್ರಿಕೆಟ್‌ ಆಡುತ್ತಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಪ್ರವಾಸದ ವೇಳೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
ಆ. 22ರಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುವ 2 ಪಂದ್ಯಗಳ ಟೆಸ್ಟ್‌ ಸರಣಿ ವೇಳೆ ಕೊಹ್ಲಿ, ಬುಮ್ರಾ ಇಬ್ಬರೂ ತಂಡಕ್ಕೆ ಮರಳಲಿದ್ದಾರೆ. ಭಾರತದ ಪಾಲಿಗೆ ಈ ವರ್ಷದಿಂದ ಆರಂಭವಾಗಲಿರುವ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನ ಮೊದಲ ಸರಣಿ ಇದಾಗಲಿದೆ.

Advertisement

ಭಾರತದ ಕ್ರಿಕೆಟಿಗರಿಗೆ ವಿಶ್ರಾಂತಿಯ ಕೊರತೆ ಎದುರಾಗುತ್ತದೆ. ಹಿಗಾಗಿ ನಾವು ಈ ತೀರ್ಮಾನ ತೆಗೆದು ಕೊಂಡಿದ್ದೇವೆ ಎಂದು ವಿಂಡೀಸ್‌ ಮಂಡಳಿಗೆ ಬಿಸಿಸಿಐ ಮನವರಿಕೆ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next