Advertisement

ಮುಂದಿನ ವಾರ ಕೊಹ್ಲಿ-ಅನುಷ್ಕಾ ಮದುವೆ?

06:00 AM Dec 07, 2017 | |

ನವದೆಹಲಿ: ಇದುವರೆಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ-ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಮದುವೆಯಾಗುತ್ತಾರೆಂದರೆ ಸುಳ್ಳು ಎಂದು ಇಬ್ಬರೂ ನಿರಾಕರಿಸುತ್ತಿದ್ದರು. ಇದೀಗ ಬಂದಿರುವ ನೂತನ ವರದಿಗಳ ಪ್ರಕಾರ ಮುಂದಿನ ವಾರವೇ ಕೊಹ್ಲಿ-ಅನುಷ್ಕಾ ಇಟಲಿಯ ಮಿಲಾನ್‌ನಲ್ಲಿ ವಿವಾಹವಾಗುವುದು ಖಚಿತ. ಕೊಹ್ಲಿ ಗುರುವಾರವೇ ಇಟಲಿಗೆ ಹೊರಡಲಿದ್ದಾರೆ. ಮದುವೆ ಅತ್ಯಂತ ಖಾಸಗಿ ಕಾರ್ಯಕ್ರಮವಾಗಿದ್ದು, ಯಾವುದೇ ಕ್ರಿಕೆಟಿಗನಿಗೂ ಆಹ್ವಾನ ಸಿಕ್ಕಿಲ್ಲ.

Advertisement

ಡಿ.9,10,11, 12 ಈ ಇಷ್ಟರಲ್ಲಿ ಯಾವುದೇ ದಿನಾಂಕದಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ. ಡಿ.21ರಂದು ಮುಂಬೈನಲ್ಲಿ ಆರತಕ್ಷತೆ ಇರುವುದರಿಂದ ಅಲ್ಲಿ ಎಲ್ಲ ಕ್ರಿಕೆಟಿಗರೂ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಕಳೆದ ವಾರ ಅನುಷ್ಕಾ ಶರ್ಮ ಮನೆಯಿಂದ ವಸ್ತ್ರ ವಿನ್ಯಾಸಕ ಸಬÂಸಾಚಿ ಮುಖರ್ಜಿ ಹೊರಹೋಗುತ್ತಿದ್ದಾಗ ಮಾಧ್ಯಮದ ಕಣ್ಣಿಗೆ ಬಿದ್ದಿದ್ದರು. ಆಗಲೇ ವಿವಾಹದ ಸುಳಿವು ಸಿಕ್ಕಿತ್ತು. ಆದರೂ ಮದುವೆಯ ಬಗ್ಗೆ ಅನುಷ್ಕಾ ಕುಟುಂಬ ಯಾವುದೇ ಸ್ಪಷ್ಟನೆಯನ್ನು ಇನ್ನೂ ನೀಡಿಲ್ಲ. ಸ್ವತಃ ಕೊಹ್ಲಿ ಬಾಲ್ಯಕಾಲದ ಕೋಚ್‌ ರಾಜ್‌ಕುಮಾರ್‌ ಶರ್ಮ ಡಿ.7ರಿಂದ ಮದುವೆಯೊಂದರಲ್ಲಿ ಭಾಗವಹಿಸುತ್ತೇನೆಂದು ರಣಜಿಯಿಂದ ದೂರವುಳಿದಿದ್ದಾರೆ. ಇದು ಕೂಡ ಅನುಮಾನ ಬಲಗೊಳ್ಳಲು ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next