ಕೊಲಂಬೊ: ಇಲ್ಲಿ ಗುರುವಾರ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ನ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಆರಂಭದಲ್ಲೇ ಶಿಖರ್ ಧವನ್ ಅವರನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಧವನ್ 4 ರನ್‌ಗೆ ನಿರ್ಗಮಿಸಿದರು. ಆ ಬಳಿಕ ಸ್ಫೋಟಕ ಆಟವಾಡಿದ ಕೊಹ್ಲಿ 77 ಎಸೆತಗಳಲ್ಲಿ ಶತಕ ಪೂರೈಸಿದರು. ಕೊಹ್ಲಿ 131 ರನ್‌ಗಳಿಸಿ ಔಟಾದರು. ಇದು ಕೊಹ್ಲಿ ಅವರ ಏಕದಿನ ಕ್ರಿಕೆಟ್‌ನ 29 ನೇ ಶತಕವಾಗಿದೆ.
ಜಯಸೂರ್ಯ ದಾಖಲೆ ಹಿಂದಿಕ್ಕಿದ ಕೊಹ್ಲಿ
29 ನೇ ಶತಕ ಸಿಡಿಸುವ ಮೂಲಕ 28 ಶತಕಗಳನ್ನು ಸಿಡಿಸಿದ್ದ ಸನತ್ ಜಯಸೂರ್ಯ ದಾಖಲೆಯನ್ನು ಹಿಂದಿಕ್ಕಿ 3 ನೇ ಸ್ಥಾನಕ್ಕೆ ಬಂದಿದ್ದಾರೆ. 30 ಶತಕಗಳನ್ನು ಸಿಡಿಸಿರುವ ಆಸೀಸ್‌ನ ರಿಕಿ ಪಾಂಟಿಂಗ್ 2 ನೇ ಸ್ಥಾನದಲ್ಲಿದ್ದು , 49 ಶತಕ ಸಿಡಿಸಿರುವ ಸಚಿನ್ ತೆಂಡುಲ್ಕರ್ ಅಗ್ರ ಸ್ಥಾನಿಯಾಗಿದ್ದಾರೆ.
30 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿದ್ದು, ರೋಹಿತ್ ಶರ್ಮಾ 90 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಆರಂಭದ ಮೂರು ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿರುವ ಭಾರತ
ಈಗಾಗಲೇ ಏಕದಿನ ಸರಣಿ ಗೆದ್ದಿದೆ.