Advertisement

ಕೊಹ್ಲಿಗೆ ನಿಷೇಧದ ತೂಗುಗತ್ತಿ

02:14 AM Jul 06, 2019 | Sriram |

ಬರ್ಮಿಂಗ್‌ಹ್ಯಾಮ್‌: ಔಟ್ಗಾಗಿ ಅತಿಯಾದ ಮನವಿ ಸಲ್ಲಿಕೆ, ಫೀಲ್ಡ್ ಅಂಪೈರ್‌ ಜತೆ ವಾಗ್ವಾದ ನಡೆಸಿದ ಕಾರಣ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ನಿಷೇಧದ ಭೀತಿ ಎದುರಾಗಿದೆ. ಈಗಾಗಲೇ ಕೆಲವು ಪಂದ್ಯಗಳಲ್ಲಿ ಕೊಹ್ಲಿ ಔಟ್ಗಾಗಿ ಅತಿಯಾದ ಮನವಿ ಸಲ್ಲಿಸಿ ಅಶಿಸ್ತು ಪ್ರದರ್ಶಿಸಿದ್ದಾರೆ.

Advertisement

ಫೀಲ್ಡ್ ಅಂಪೈರ್‌ ಔಟ್ ಕೊಡದೇ ಇದ್ದಾಗ ಸಿಟ್ಟಿನಿಂದ ವಾಗ್ವಾದ ನಡೆಸಿದ್ದಾರೆ. ಇದನ್ನು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಕ್ಷಣದಲ್ಲೂ ಕೊಹ್ಲಿಗೆ 1 ಪಂದ್ಯದ ನಿಷೇಧದ ಶಿಕ್ಷೆ ಎದುರಾಗಬಹುದು ಎನ್ನಲಾಗಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಶಮಿ ಬೌಲಿಂಗ್‌ನಲ್ಲಿ ಸೌಮ್ಯ ಸರ್ಕಾರ್‌ಗೆ ಔಟ್ ಕೊಡದಿರುವುದಕ್ಕೆ ಸಿಟ್ಟಾಗಿದ್ದ ಕೊಹ್ಲಿ ಅಂಪೈರ್‌ ಜತೆ ವಾಗ್ವಾದ ನಡೆಸಿದ್ದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಅಶಿಸ್ತಿನ ವರ್ತನೆಯಿಂದ ಪಂದ್ಯದ ಶೇ.25ರಷ್ಟು ದಂಡ ತೆತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next