ಹೊಸದಿಲ್ಲಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಮಗುವಿಗೆ ‘ವಮಿಕಾ ’ ಎಂದು ಹೆಸರಿಟ್ಟಿದ್ದಾಗಿ ದಂಪತಿ ಘೋಷಣೆ ಮಾಡಿಕೊಂಡಿದ್ದಾರೆ. ಅನುಷ್ಕಾ ಮಗುವನ್ನು ಹಿಡಿದುಕೊಂಡಿರುವ, ವಿರಾಟ್ ಜೊತೆಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ವೃತ್ತಿಪರ ಗೇಮರ್ ಆಗಲು ಬಯಸುತ್ತಿದ್ದೀರಾ..? ಭಾರತದಲ್ಲಿ ಆರಂಭವಾಗಿದೆ ROG ಅಕಾಡೆಮಿ
ನಾವಿಬ್ಬರು ಪ್ರೀತಿಯಿಂದ ಕೃತಜ್ಞತಾ ಭಾವದೊಂದಿಗೆ ವಾಸಿಸುತ್ತಿದ್ದೆವು. ಇದೀಗ ಪುಟ್ಟ ವಮಿಕಾ ನಮ್ಮನ್ನು ಮತ್ತೊಂದು ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.
ಜನವರಿ 11ರಂದು ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ವಿರಾಟ್ ಕೊಹ್ಲಿ ತನ್ನ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.