Advertisement

Nagarjuna: ಭಾವಿ ಸೊಸೆ ಶೋಭಿತಾರನ್ನು ‘ಹಾಟ್‌’ ಎಂದಿದ್ದ ನಾಗಾರ್ಜುನ್;‌ ವಿಡಿಯೋ ವೈರಲ್

02:07 PM Aug 08, 2024 | Team Udayavani |

ಹೈದರಾಬಾದ್:‌ ನಿನ್ನೆಯಿಂದ ಟಾಲಿವುಡ್ ನಲ್ಲಿ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ ಧೂಳಿಪಾಲ (Sobhita Dhulipala) ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಂತೂ ಇಬ್ಬರ ಎಂಗೇಜ್ ಮೆಂಟ್‌ ನೆರವೇರಿದ್ದು ಹರಿದಾಡುತ್ತಿದ್ದ ಗಾಸಿಪ್‌ ಗೆ ಫುಲ್‌ ಸ್ಟಾಪ್‌ ಬಿದ್ದಿದೆ.

Advertisement

ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ ನಲ್ಲಿರುವ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಗುರುವಾರ (ಆ.8ರಂದು) ಹೈದರಾಬಾದ್‌ನಲ್ಲಿರುವ ನಾಗಚೈತನ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕುಟುಂಬದವರ ಸಮ್ಮುಖದಲ್ಲಿ ನೆರವೇರಿತು Naga Chaitanya – Sobhita Dhulipala ನಿಶ್ಚಿತಾರ್ಥ

ಮೊದಲ ಫೋಟೋವನ್ನು  ನಾಗಚೈತನ್ಯ ತಂದೆ ನಾಗಾರ್ಜುನ ಹಂಚಿಕೊಂಡು, “ನಮ್ಮ ಮಗ ನಾಗ ಚೈತನ್ಯ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಇಂದು ಬೆಳಿಗ್ಗೆ 9:42ಕ್ಕೆ  ನೆರವೇರಿದೆ. ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ದಂಪತಿಗಳಿಗೆ ಅಭಿನಂದನೆಗಳು! ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ!” ಎಂದು ಹಾರೈಸಿದ್ದಾರೆ.

Advertisement

ಈ ನಡುವೆ ತನ್ನ ಮಗ ಎಂಗೇಜ್‌ ಮೆಂಟ್‌ ಆಗಿರುವ ಶೋಭಿತಾ ಅವರ ಅಂದವನ್ನು ಹೊಗಳಿರುವ ನಾಗಾರ್ಜುನ್‌ ಅವರ ಹಳೆಯ ವಿಡಿಯೋವೊಂದು ಈಗ ವೈರಲ್‌ ಆಗುತ್ತಿದೆ.  2018ರಲ್ಲಿ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ನಾಗಾರ್ಜುನ್‌  ಶೋಭಿತಾ ಅವರ ಬಗ್ಗೆ ಮಾತನಾಡಿದ್ದರು.

“ಶೋಭಿತಾ ಒಳ್ಳೆಯವರು. ಅಂದರೆ ನಾನು ಈ ರೀತಿ ಹೇಳಬಾರದು ಆಕೆ ಚಿತ್ರದಲ್ಲಿ ತುಂಬಾ ಹಾಟ್  ಆಗಿ ಕಾಣುತ್ತಿದ್ದಳು. ನನ್ನ ಪ್ರಕಾರ ಅವಳಲ್ಲಿ ತುಂಬಾ ಆಕರ್ಷಕವಾಗಿ ಸೆಳೆಯುವ ಅಂಶವೊಂದಿದೆ” ಎಂದು ಹೇಳಿದ್ದರು.

Nagarjuna once said this about his future Daughter in Law, Sobhita
byu/Significant-Neat-142 inBollyBlindsNGossip

ಇದೀಗ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಭಾವಿ ಸೊಸೆ ಬಗ್ಗೆ ಈ ಹಿಂದೆ ನಾಗಾರ್ಜುನ್‌ ಈ ರೀತಿ ಹೇಳಿದ್ದರು ಎಂದು ನೆಟ್ಟಿಗರು ಈ ವಿಡಿಯೋವನ್ನು ವೈರಲ್‌ ಮಾಡುತ್ತಿದ್ದಾರೆ.

2017 ರಲ್ಲಿ ನಾಗಚೈತನ್ಯ ಸಮಂತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2021ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆ ವಿಚ್ಚೇದನ ಪಡೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next