Advertisement

Spiderman: Mom not at home; ರೊಟ್ಟಿ ತಯಾರಿಸುತ್ತಿರುವ ಸ್ಪೈಡರ್ ಮ್ಯಾನ್; ವಿಡಿಯೋ ವೈರಲ್

12:18 PM Jun 20, 2024 | Team Udayavani |

ಜೈಪುರ: ಮಾರ್ವೆಲ್ ಕಾಮಿಕ್ ಪಾತ್ರ ಸ್ಪೈಡರ್ ಮ್ಯಾನ್ ವಿಶ್ವದಾದ್ಯಂತ ಪ್ರಸಿದ್ದ. ಸ್ಪೈಡರ್ ಮ್ಯಾನ್ ಪಾತ್ರದೊಂದಿಗೆ ಹಲವು ಚಿತ್ರಗಳು ತೆರೆ ಕಂಡು ಸೂಪರ್ ಹಿಟ್ ಆಗಿದೆ. ಸಂಕಷ್ಟದಲ್ಲಿರುವ ಹಲವು ಜನರನ್ನು ಕಾಪಾಡುವ ಭೂಮಿಕೆಯಲ್ಲಿ ಕಾಣಿಸುವ ಸ್ಪೈಡರ್ ಮ್ಯಾನ್ ಚಿತ್ರ ಪ್ರೇಮಿಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಆದರೆ ಜೈಪುರದಲ್ಲಿ ಸ್ಪೈಡರ್ ಮ್ಯಾನ್ ರೊಟ್ಟಿ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

Advertisement

ಜೈಪುರದ ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಬಳಕೆದಾರ ಜೈಪುರ ಕಾ ಸ್ಪೈಡರ್ ಮ್ಯಾನ್ ಹಂಚಿಕೊಂಡಿರುವ ವೀಡಿಯೊದಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿ ವ್ಯಕ್ತಿಯೊಬ್ಬರು ಮಾರ್ವೆಲ್ ಕಾಮಿಕ್ಸ್ ಪಾತ್ರವು ಭಾರತೀಯ ನಗರಗಳಲ್ಲಿ ಜೀವನಕ್ಕೆ ಹೊಂದಿಕೊಳ್ಳುತ್ತಾರೆ ಎಂದು ತೋರಿಸಿದ್ದಾರೆ. ವಿಡಿಯೋದಲ್ಲಿ, ಅವರು ರೊಟ್ಟಿಗಳನ್ನು ‘ಚುಲ್ಹಾ’ ಒಲೆಯಲ್ಲಿ ಬೇಯಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಾದ್ಯಂತ ವ್ಯಾಪಕವಾಗಿ ವೈರಲ್ ಆಗಿದೆ.

ಹಲವರು ಈ ವಿಡಿಯೋ ಸಾಕಷ್ಟು ತಮಾಷೆಯ ರೀತಿಯಲ್ಲಿ ಸ್ಪಂದಿಸಿದ್ದಾರೆ. ಕೆಲವರು ‘ಸ್ಪೈಡರ್ ಮ್ಯಾನ್ ಅಮ್ಮ ಮನೆಯಲ್ಲಿಲ್ಲ’, ‘ಅವೆಂಜರ್ ಗಳಿಗೆ ತಿಂಡಿ ತಯಾರು ಮಾಡುತ್ತಿದ್ದಾರೆ’, ಸ್ಪೈಡರ್ ಮ್ಯಾನ್ ವರ್ಕ್ ಫ್ರಮ್ ಹೋಮ್’ ಎಂಬ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next