Advertisement

ವಜ್ರದ ನೆಕ್ಲೇಸ್ ಕದ್ದ ಕಳ್ಳ ‘ಇಲಿ’! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಇಲಿಯ ಕೈಚಳಕ

08:30 PM Feb 05, 2023 | Team Udayavani |

ಒಡವೆಗಳನ್ನು ದೋಚಿದ ಸುದ್ದಿಗಳನ್ನ ಕೇಳುತ್ತಿದ್ದಂತೆ ನಮ್ಮೆಲ್ಲರ ಕಣ್ಣ ಮುಂದೆ ಬರುವ ಚಿತ್ರಣ ಸರಗಳ್ಳನದ್ದು ! ಸರಗಳ್ಳರ ಬಗ್ಗೆ ಹಲವು ರೀತಿಯ ಕತೆಗಳಿವೆ. ಇಲ್ಲೊಂದೆಡೆಯೂ ಅದೇ ರೀತಿ ಕಳ್ಳತನವಾಗಿದೆ. ಆದರೆ, ಕದ್ದಿರೋದು ಮನುಷ್ಯನಲ್ಲ! ಕಳ್ಳ ಇಲಿ..!

Advertisement

ಒಡವೆ ಅಂಗಡಿಯಲ್ಲಿ ಶೋ ಪೀಸ್‌ನಲ್ಲಿದ್ದ ವಜ್ರದ ಸರವೊಂದನ್ನು ಇಲಿಯೊಂದು ನಾಜೂಕಾಗಿ ಬಿಡಿಸಿ, ಎತ್ತಿಕೊಂಡು, ಬಂದದಾರಿಯಲ್ಲೇ ಹಿಂದಿರುಗಿದೆ. ಈ ವಿಡಿಯೋವನ್ನು ಐಪಿಎಸ್‌ ಅಧಿಕಾರಿ ರಾಜೇಶ್‌ ಹಿಂಗಾನ್ಕರ್‌ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಇಲಿ ಯಾರಿಗಾಗಿ ನೆಕ್‌ಲೇಸ್‌ ತೆಗೆದುಕೊಂಡು ಹೋಗುತ್ತಿದೆ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

ಕ್ಯಾಮರಾದಲ್ಲಿ ಸೆರೆಯಾಗಿರುವ ಕಳ್ಳ ಇಲಿಯ ಕೈಚಳಕ ಕಂಡು ನೆಟ್ಟಿಗರು ಹೌಹಾರಿದ್ದು, ಇಲಿಯೂ ಕಳ್ಳನಾಗಬಹುದೆಂದು ಯಾರು ತಾನೆ ಊಹಿಸಲು ಸಾಧ್ಯ ಎಂದು ಆಶ್ಚರ್ಯ ಪಟ್ಟಿದ್ದಾರೆ. ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, 30 ಸಾವಿರಕ್ಕಿಂತ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಇದನ್ನೂ ಓದಿ: ಚೀನ ಸೇರಿದಂತೆ ವಿದೇಶಗಳ 232 ಆ್ಯಪ್‌ ಗಳು ಬ್ಲಾಕ್‌

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next