ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ತನಿಖೆಯಲ್ಲಿ ದಿನಕ್ಕೊಂದು ವಿಚಾರ ಹೊರಬರುತ್ತಿದ್ದು, ಇದರೊಂದಿಗೆ ನಟನ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಬಗ್ಗೆಯು ಮಹತ್ವದ ವಿಚಾರಗಳು ಚರ್ಚೆಯ ವಿಷಯವಾಗುತ್ತಿದೆ.
ದಿಶಾ ಸಾಲ್ಯಾನ್ ಸಾವಿಗೆ ಮುನ್ನ ಮನೆಯಲ್ಲಿ ಸ್ನೇಹಿತ ರೋಹನ್ ರಾಯ್ ಮತ್ತು ಇರರೊಂದಿಗೆ ನಡೆಸಿದ್ದ ಪಾರ್ಟಿಯೊಂದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜೂನ್ 9ರಂದು ದಿಶಾ ಸಾಲ್ಯಾನ್ ಅವರು ಮುಂಬೈನ ಮಲಾಡ್ ನ ಬಹುಮಹಡಿಯ ಕಟ್ಟಡದಿಂದ ಕೆಳಗ್ಗೆ ಬಿದ್ದು ಸಾವನ್ನಪ್ಪಿದ್ದರು. ಇದಾದ ಒಂದು ವಾರದ ನಂತರ ಅಂದರೆ ಜೂನ್ 14ರಂದು ಸುಶಾಂತ್ ಸಿಂಗ್ ಸಾವನ್ನಪ್ಪಿದ್ದರು. ಇದರಿಂದಾಗಿ ದಿಶಾ ಸಾವು ಪ್ರಕರಣಕ್ಕೆ ಮಹತ್ವ ಬಂದಿತ್ತು.
Related Articles
28 ವರ್ಷದ ದಿಶಾ ಸಾಲ್ಯಾನ್ ತನ್ನ ಪ್ರಿಯಕರ ರೋಹನ್ ರಾಯ್ ಮತ್ತು ಕೆಲವು ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುತ್ತಾ ಪಾರ್ಟಿ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ.
ದಿಶಾಳನ್ನು ಸಾಮುಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಸಂಸದರೊಬ್ಬರು ಆರೋಪಿಸಿದ್ದರು. ಆದರೆ ಹೀಗೇ ಏನು ಆಗಿಲ್ಲ ಎಂದು ದಿಶಾ ಪೋಷಕರು ಆರೋಪವನ್ನು ಅಲ್ಲಗೆಳೆದಿದ್ದಾರೆ.