Advertisement

Viral Video: ಹೆಚ್ಚುವರಿ ಹಣ ನೀಡದ ಗ್ರಾಹಕನಿಗೆ ಥಳಿಸಿದ ಆಟೋ ರಿಕ್ಷ ಚಾಲಕರು; ಓರ್ವನ ಬಂಧನ

12:52 PM Aug 12, 2024 | Team Udayavani |

ಮುಂಬೈ: ಹೆಚ್ಚುವರಿ ಹಣ ನೀಡದ ಕಾರಣಕ್ಕೆ ಪ್ರಯಾಣಿನೊಬ್ಬನಿಗೆ ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮಂಖುರ್ದ್ ರೈಲ್ವೆ ಠಾಣೆಯ ಬಳಿ ಈ ಘಟನೆ ನಡೆದಿತ್ತು.

Advertisement

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆರೋಪಿ ಅಖೀಲ್ ಯೂನಸ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ. ಹೆಚ್ಚುವರಿ ಶುಲ್ಕವನ್ನು ನೀಡಲು ನಿರಾಕರಿಸಿದ ನಂತರ 21 ವರ್ಷದ ಸಂತ್ರಸ್ತ ಸೊಹೈಲ್ ಅನ್ಸಾರಿ ಮೇಲೆ ಆಟೋರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.

ಮುಂಬೈ ಪೊಲೀಸರು ಬಂಧನದ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟರ್) ಘೋಷಣೆ ಮಾಹಿತಿ ನೀಡಿದ್ದಾರೆ.

“ಹೆಚ್ಚುವರಿ ದರವನ್ನು ಪಾವತಿಸುವ ವಿವಾದದಲ್ಲಿ ಆಟೋ-ರಿಕ್ಷಾ ಚಾಲಕರು ಪ್ರಯಾಣಿಕರೊಬ್ಬರ ಮೇಲೆ ಮಂಖುರ್ದ್ ರೈಲ್ವೆ ನಿಲ್ದಾಣದ ಬಳಿ ಹಲ್ಲೆ ನಡೆಸಿದ ಘಟನೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯೊಬ್ಬನ ಬಂಧನವಾಗಿದೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಪೋಸ್ಟ್‌ ತಿಳಿಸಿದೆ.

Advertisement

ಮೂವರು ಆರೋಪಿಗಳು ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದು, ಅವರಲ್ಲಿ ಒಬ್ಬ ಬೆಲ್ಟ್ ಬಳಸಿ ಆತನಿಗೆ ಹೊಡೆದಿದ್ದಾರೆ. ಅನ್ಸಾರಿ ಅವರ ಎದೆ ಮತ್ತು ತಲೆಯ ಮೇಲೆ ಸೊಂಟದ ಬೆಲ್ಟ್‌ ನಿಂದ ಪದೇ ಪದೇ ಹೊಡೆದು ಥಳಿಸಲಾಗಿದೆ. ಆರೋಪಿಗಳು ಅನ್ಸಾರಿಗೆ ಘಟನೆಯನ್ನು ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದರು, ಆದರೆ ಅನ್ಸಾರಿ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next