ಅಮೇಥಿ: ಎಟಿಎಂ ಮಿಷನ್ ನಲ್ಲಿ ನಕಲಿ 200 ರೂ. ನೋಟುಗಳು ವಿತ್ ಡ್ರಾ ಆಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಉತ್ತರಪ್ರದೇಶದ ಅಮೇಥಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಅಮೇಥಿಯ ಮುನ್ಷಿಗಂಜ್ ರಸ್ತೆ ಸಬ್ಜಿ ಮಂಡಿ ಪ್ರದೇಶದ ಎಟಿಎಂ ಯಂತ್ರವೊಂದರಲ್ಲಿ ನಕಲಿ 200 ರೂ. ನೋಟುಗಳು ಬರುತ್ತಿವೆ. ದೀಪಾವಳಿಯ ಹಬ್ಬದ ಶಾಪಿಂಗ್ ಗಾಗಿ ಎಟಿಎಂನಲ್ಲಿ ಹಣ ತೆಗೆಯಲು ಹೋದಾಗ ಕೆಲವರಿಗೆ ನಕಲಿ 200 ರೂ. ನೋಟುಗಳು ವಿತ್ ಡ್ರಾ ಆಗಿ ಬಂದಿವೆ. ಎಟಿಎಂನಲ್ಲಿ ನಕಲಿ ನೋಟುಗಳನ್ನು ಕಂಡು ಆಕ್ರೋಶಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೋಟಿನ ಮೇಲೆ ಫುಲ್ ಆಫ್ ಪನ್ನ್ , ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿದೆ. ಎಟಿಎಂನಲ್ಲಿ ನಕಲಿ ನೋಟುಗಳು ಬರುವುದನ್ನು ಸ್ಥಳೀಯರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಎಟಿಎಂನಲ್ಲಿ 5000 ರೂ. ವಿತ್ ಡ್ರಾ ಮಾಡಿದೆ. ಇದರಲ್ಲಿ ಒಂದು ನಕಲಿ 200 ರೂ. ನೋಟಿತ್ತು. ಮತ್ತೊಬ್ಬನಿಗೂ ಇದೇ ರೀತಿ ಆಗಿದೆ. ಪೊಲೀಸರರಿಗೆ ಮಾಹಿತಿ ನೀಡಿದ್ದೇವೆ ಎಂದು ಕಿಶನ್ ವಿಶ್ವಕರ್ಮ ಎನ್ನುವವರು ಹೇಳುತ್ತಾರೆ.
ವರದಿಯ ಪ್ರಕಾರ ಈ ಎಟಿಎಂ ಮಿಷನ್ ಬಳಿ ಸೆಕ್ಯೂರಿಟಿ ಗಾರ್ಡ್ ಕೂಡ ಇಲ್ಲ. ಈ ಮಿಷನ್ ಇಂಡಿಯಾ 1 ಸಂಸ್ಥೆಗೆ ಸೇರಿದ್ದು. 2021 ರಲ್ಲಿ ಇಂಡಿಯಾ 1 ಸಂಸ್ಥೆ ದೇಶದೆಲ್ಲೆಡೆ ಸುಮಾರು 3000 ಕ್ಕೂ ಅಧಿಕ ಮಿಷನ್ ಗಳನ್ನು ಅಳವಡಿಸಲಾಗಿದೆ.