Advertisement

ಚಲಿಸುತ್ತಿರುವ ಬೈಕ್‌ ನಲ್ಲೇ ಅಪ್ಪುಗೆ,ಮುದ್ದು, ಮುತ್ತು ಇತ್ಯಾದಿ.. ಪ್ರೇಮಿಗಳ ವಿಡಿಯೋ ವೈರಲ್

12:45 PM Feb 08, 2023 | Team Udayavani |

ಜೈಪುರ: ಇತ್ತೀಚೆಗೆ ಚಲಿಸುವ ಬೈಕ್‌ ನಲ್ಲಿ ಯುವ ಜನರು ಸಾಹಸಗಳನ್ನು ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜಸ್ಥಾನದ ಅಜ್ಮೀರ್ ನಲ್ಲಿ ಯುವ ಜೋಡಿಯೊಂದು ಚಲಿಸುತ್ತಿರುವ ಬೈಕ್‌ ನಲ್ಲಿ ರೊಮ್ಯಾನ್ಸ್‌ ಮಾಡುತ್ತಾ ಹೋಗುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ಪ್ರಾದೇಶಿಕ ಕಾಲೇಜು ಕ್ರಾಸ್‌ರೋಡ್ಸ್ – ನೌಸರ್ ವ್ಯಾಲಿ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡುತ್ತಾ ಬೈಕ್‌ ನಲ್ಲಿ ಹೋಗಿದ್ದಾರೆ. ಯುವತಿ ಬೈಕ್‌ ನ ಮುಂಭಾಗದಲ್ಲಿ ಕೂತು, ಯುವಕನನ್ನು ಅಪ್ಪಿಕೊಂಡು, ಮುದ್ದಾಡಿದ್ದಾಳೆ. ಯುವಕ ಆಕೆಗೆ ಮುತ್ತು ಕೊಟ್ಟಿದ್ದಾನೆ. ಚಲಿಸುತ್ತಿರುವ ಬೈಕ್‌ ನಲ್ಲೇ ಈ ರೀತಿ ಮಾಡಿಕೊಂಡು ಹೋಗುತ್ತಿರುವುದನ್ನು ಬೇರೆ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.

ಸೋಮವಾರ ( ಫೆ.6 ರಂದು) ರಾತ್ರಿ ಈ ಘಟನೆ ನಡೆದಿದ್ದು, ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ ಠಾಣೆ ಪೊಲೀಸರು ವಿಷಯ ತಿಳಿದು ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದು, ತಡರಾತ್ರಿ ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದಾರೆ.

ಸವಾರ ಸಾಹಿಲ್‌ ಹಾಗೂ ಯುವತಿಯನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಹಿಂದೆ ಜಾರ್ಖಂಡ್‌ ಹಾಗೂ ಲಕ್ನೋದಲ್ಲಿ ಇದೇ ರೀತಿಯ ಘಟನೆಗಳು ನೆಡೆದಿತ್ತು.

Advertisement

Advertisement

Udayavani is now on Telegram. Click here to join our channel and stay updated with the latest news.

Next