Advertisement

ಐಪಿಎಲ್‌ ಫೈನಲ್‌ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್‌ ಆರ್ಡರ್:‌ ಸ್ವಿಗ್ಗಿ ಟ್ವೀಟ್‌ Viral

10:40 AM May 30, 2023 | Team Udayavani |

ಅಹಮದಬಾದ್:‌ ಐಪಿಎಲ್‌ ನ ರೋಚಕ ಫೈನಲ್‌ ಮುಕ್ತಾಯ ಕಂಡಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 5ನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

Advertisement

ಫೈನಲ್ ಪಂದ್ಯವನ್ನು ವೀಕ್ಷಿಸಲು ಮಳೆಯನ್ನು ಲೆಕ್ಕಿಸದೇ 75 ಸಾವಿರ ಮಂದಿ ಸ್ಟೇಡಿಯಂಗೆ ಬಂದಿದ್ದಾರೆ. ಪಂದ್ಯ ನಡೆಯುತ್ತಿರುವಾಗ ಜನಪ್ರಿಯ ಫುಡ್‌ ಡೆಲಿವರಿ ಸ್ವಿಗ್ಗಿ ಆ್ಯಪ್ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ.

ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 212 ಬಿರಿಯಾನಿಗಳು ಆರ್ಡರ್‌ ಆಗಿವೆ. ಒಟ್ಟು 12 ಮಿಲಿಯನ್‌ ಬಿರಿಯಾನಿಗಳು ಫೈನಲ್‌ ಪಂದ್ಯದ ವೇಳೆ ಆರ್ಡರ್‌ ಆಗಿವೆ ಎಂದು ಸ್ವಿಗ್ಗಿ ಟ್ವೀಟ್‌ ಮಾಡಿದೆ.

ಇದರರೊಂದಿಗೆ ಮಾಡಿರುವ ಮತ್ತೊಂದು ಟ್ವೀಟ್‌ ವೈರಲ್‌ ಆಗಿದ್ದು, ನೆಟ್ಟಿಗರು ನಾನಾ ಬಗೆಯಲ್ಲಿ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ:ನಿವೃತ್ತಿ ಘೋಷಣೆ ಮಾಡುವುದು ಸುಲಭ ಆದರೆ…: ಕ್ರಿಕೆಟ್ ವಿಶ್ವದ ಕುತೂಹಲ ತಣಿಸಿದ Dhoni ಉತ್ತರ

Advertisement

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ 2423 ಕಾಂಡೋಮ್‌ಗಳನ್ನು ಆರ್ಡರ್‌ ಮಾಡಿದ್ದಾರೆ ಎಂದು ಸಂಸ್ಥೆ ಟ್ವೀಟ್‌ ಮಾಡಿದೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಇದುವರೆಗೆ 2423 ಕಾಂಡೋಮ್‌ಗಳನ್ನು ವಿತರಿಸಲಾಗಿದೆ. ಇಂದು ರಾತ್ರಿ 22 ಕ್ಕೂ ಹೆಚ್ಚು ಆಟಗಾರರು ಆಡುತ್ತಿರುವಂತೆ ತೋರುತ್ತಿದೆ ಎಂದು ಕಾಂಡೋಮ್‌ ಕಂಪೆನಿಯೊಂದನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದು ವೈರಲ್‌ ಆಗಿದೆ.

ಈ ಟ್ವೀಟ್‌  793.3 ಲಕ್ಷ ಜನರಿಗೆ ತಲುಪಿದ್ದು, 8,878 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ.

“ಇದು ಸ್ವಿಗ್ಗಿಯ ನಿಜವಾದ ಮಟ್ಟ” ಎಂದು ಒಬ್ಬರು ರಿಟ್ವೀಟ್‌ ಮಾಡಿದ್ದಾರೆ. “ನನಗೆ 22 ಆಟಗಾರರ ಬಗ್ಗೆ ತಿಳಿದಿಲ್ಲ, ಆದರೆ ಇತರ 2423 ಆಟಗಾರರು ನಿಜವಾಗಿಯೂ ಸುರಕ್ಷಿತವಾಗಿ ಆಡುತ್ತಿದ್ದಾರೆ” ಎಂದು ಕಮೆಂಟ್‌ ಮಾಡಿದ್ದಾರೆ. “ಈ ಅಂಕಿಅಂಶಗಳನ್ನು ನೋಡಿದ ಬಳಿಕ ಸಿಂಗಲ್ಸ್‌ ಒಂದು ಬದಿಯಲ್ಲಿ ಕೂತು  ಅಳುತ್ತಾರೆ”  ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next