Advertisement

“ಡಂಕಿ” ಚಿತ್ರೀಕರಣ ಮುಕ್ತಾಯ…ನಟ ಶಾರುಖ್ ಖಾನ್ ಮೆಕ್ಕಾಗೆ ಭೇಟಿ, ಫೋಟೋ ವೈರಲ್

11:51 AM Dec 02, 2022 | Team Udayavani |

ರಿಯಾದ್: ಡಂಕಿ ಸಿನಿಮಾದ ಚಿತ್ರೀಕರಣಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ನಟ ಶಾರುಖ್ ಖಾನ್, ಮೆಕ್ಕಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಶಾರುಖ್ ಖಾನ್ ಮೆಕ್ಕಾಗೆ ಭೇಟಿ ನೀಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಇದನ್ನೂ ಓದಿ:ಸಂಸತ್ ನಲ್ಲಿ ಅಚ್ಚ ಕನ್ನಡದಲ್ಲಿ ಭಾಷಣ ಮಾಡಿ ಗಮನಸೆಳೆದ ಕೋಲಾರದ ವಿದ್ಯಾರ್ಥಿನಿ

ಮುಖಕ್ಕೆ ಮಾಸ್ಕ್ ಧರಿಸಿ, ಬಿಳಿ ವಸ್ತ್ರ ತೊಟ್ಟುಕೊಂಡಿರುವ ಶಾರುಖ್ ಖಾನ್ ಉಮ್ರಾ(ಮೆಕ್ಕಾಕ್ಕೆ ತೆರಳುವ ತೀರ್ಥಯಾತ್ರೆ)ದಲ್ಲಿರುವುದು ಫೋಟೋದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿದೆ.

ಖಾನ್ ಸುತ್ತ ಜನರು ಸುತ್ತುವರಿದಿದ್ದು, ಮೆಕ್ಕಾ ಯಾತ್ರೆಯಲ್ಲಿರುವ ಶಾರುಖ್ ಫೋಟೋಗಳನ್ನು ಖಾನ್ ಫ್ಯಾನ್ ಕ್ಲಬ್ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಖಾನ್ ಅಭಿಮಾನಿಗಳು ಕಮೆಂಟ್ ಗಳ ಮಹಾಪೂರ ಹರಿಸಿದ್ದಾರೆ.

ಬುಧವಾರ ಶಾರುಖ್ ಖಾನ್ ತನ್ನ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ ಸೌದಿಅರೇಬಿಯಾದಲ್ಲಿ ನಿಗದಿತ ಸಮಯಕ್ಕೆ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದರು. “ ಸೌದಿಯಲ್ಲಿ ನಿಗದಿಯಂತೆ ಡಂಕಿ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ನಾನು ರಾಜು ಸರ್ ಗೆ ಧನ್ಯವಾದ ಹೇಳುತ್ತೇನೆ. ಸೌದಿಯ ಸಂಸ್ಕೃತಿ ಮತ್ತು ಸಿನಿಮಾ ಸಚಿವಾಲಯಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುವುದಾಗಿ ವಿಡಿಯೋದಲ್ಲಿ ಶಾರುಖ್ ಖಾನ್ ತಿಳಿಸಿದ್ದಾರೆ.

Advertisement

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ನಟನೆಯ ಪಠಾಣ್ ಸಿನಿಮಾ 2023ರ ಜನವರಿ 25ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಮತ್ತೊಂದೆಡೆ ಡಂಕಿ, ಜವಾನ್ ಸಿನಿಮಾದ ಚಿತ್ರೀಕರಣದಲ್ಲಿ ಶಾರುಖ್ ಬ್ಯುಸಿಯಾಗಿರುವುದಾಗಿ ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next