Advertisement
ಸಾನಿಯ ಮಿರ್ಜಾ(Sania Mirza) ಪತಿ ಶೋಯೆಬ್ ಮಲಿಕ್ ಅವರಿಂದ ಕೆಲ ತಿಂಗಳ ಹಿಂದೆ ದೂರವಾಗಿದ್ದಾರೆ. ಶೋಯೆಬ್ ಮಲಿಕ್ ಬೇರೆ ವಿವಾಹ ಕೂಡ ಆಗಿದ್ದಾರೆ. ಇತ್ತ ಶಮಿ ಕೂಡ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ.
Related Articles
Advertisement
ಸಾಮಾಜಿಕ ಜಾಲತಾಣಗಳೊಂದಿಗೆ ಎಲ್ಲರೂ ಜವಾಬ್ದಾರರಾಗಿರಬೇಕು, ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುವುದನ್ನು ತಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದರು.
ಇದೀಗ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಅವರು ಜತೆಯಾಗಿರುವ ಫೋಟೋಗಳು ವೈರಲ್ ಆಗಿದೆ.
ಸಾನಿಯಾ ಹಾಗೂ ಶಮಿ ಅವರು ಜತೆಯಲ್ಲಿ ದುಬೈಯಲ್ಲಿರುವ ಕೆಲ ಫೋಟೋಗಳಯ ವೈರಲ್ ಆಗಿದೆ. ಸಾನಿಯಾ – ಶಮಿ ಬೀಚ್ವೊಂದರಲ್ಲಿ ಜತೆಯಾಗಿ ನಿಂತುಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನೊಂದು ಫೋಟೋದಲ್ಲಿ ಸಾನಿಯಾ – ಶಮಿ ಮದುವೆ ಆದ ಲುಕ್ನಲ್ಲಿ ನವ ಜೋಡಿಯಂತೆ ಕಾಣುತ್ತಿದ್ದಾರೆ.
ಈ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ ಇದೊಂದು ʼಎಐʼ ರಚಿತ ಫೋಟೊವೆಂದು ಅಸಲಿಯತ್ತು ಗೊತ್ತಾಗಿದೆ.
ಎಐನಿಂದ (AI) ಈ ರೀತಿ ಫೋಟೋಗಳನ್ನು ಕ್ರಿಯೇಟ್ ಮಾಡಿ ವೈರಲ್ ಮಾಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಪ್ರಭಾಸ್ ಹಾಗೂ ಅನುಷ್ಕಾ ಅವರ ಫೋಟೋವನ್ನು ಸಹ ಇದೇ ರೀತಿಯಾಗಿ ವೈರಲ್ ಮಾಡಲಾಗಿತ್ತು.