Advertisement

Viral News: 57 ವರ್ಷದ ಹಿಂದೆಯೇ ನೇಪಾಳದ ಅಂಚೆ ಚೀಟಿಯಲ್ಲಿ ರಾಮ ಮಂದಿರ ಉದ್ಘಾಟನೆಯ ಭವಿಷ್ಯ!

12:22 PM Jan 18, 2024 | Team Udayavani |

ನವದೆಹಲಿ: ಬಾಲರಾಮನ ವಿಗ್ರಹವು ಈಗಾಗಲೇ ಅಯೋಧ್ಯೆಯಲ್ಲಿನ ಭವ್ಯ ರಾಮಮಂದಿರವನ್ನು ಪ್ರವೇಶಿಸಿದ್ದು, ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲು ಎಲ್ಲಾ ಸಿದ್ಧತೆ ನಡೆಯುತ್ತಿದ್ದು, ಏತನ್ಮಧ್ಯೆ ನೆರೆಯ ನೇಪಾಳ ಸುಮಾರು 57 ವರ್ಷಗಳ ಹಿಂದೆ ಬಿಡುಗಡೆಗೊಳಿಸಿರುವ ಭಗವಾನ್‌ ಶ್ರೀರಾಮ ಮತ್ತು ಸೀತೆಯ ಅಂಚೆ ಚೀಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

Advertisement

ನೇಪಾಳ ಬಿಡುಗಡೆ ಮಾಡಿದ ಅಂಚೆ ಚೀಟಿಯಲ್ಲಿ ಏನಿದೆ ವಿಶೇಷ?

1967ರ ಏಪ್ರಿಲ್‌ 18ರಂದು (ರಾಮ ನವಮಿ) ದಿನಂದು ನೇಪಾಳ ಭಗವಾನ್‌ ಶ್ರೀರಾಮ್‌ ಮತ್ತು ಸೀತೆಯನ್ನೊಳಗೊಂಡ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಕುತೂಹಲಕಾರಿ ವಿಷಯ ಏನೆಂದರೆ ಈ ಅಂಚೆ ಚೀಟಿಯಲ್ಲಿ ರಾಮಮಂದಿರ ಉದ್ಘಾಟನೆಯ ಇಸವಿ (2024)ಯನ್ನು ನಮೂದಿಸಿರುವುದು ಎಲ್ಲರ ಗಮನ ಸೆಳೆಯಲು ಕಾರಣವಾಗಿದೆ!

ಇದನ್ನೂ ಓದಿ:Team India; ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ…: ಟಿ20 ವಿಶ್ವಕಪ್ ತಂಡದ ಬಗ್ಗೆ ರೋಹಿತ್

1967ರಲ್ಲಿ ನೇಪಾಳ ಬಿಡುಗಡೆಗೊಳಿಸಿದ ಈ ಸ್ಟ್ಯಾಂಪ್‌ ಬೆಲೆ ಕೇವಲ 15 ಪೈಸೆ. ಈ ಅಂಚೆ ಚೀಟಿ ಲಕ್ನೋ ನಿವಾಸಿ ಅಶೋಕ್‌ ಕುಮಾರ್‌ ಎಂಬವರ ಸಂಗ್ರಹದಲ್ಲಿದ್ದು, ಅದನ್ನು ಅವರ ಖಾಸಗಿ ಲಿಟಲ್‌ ಮ್ಯೂಸಿಯಂನಲ್ಲಿ ಇಟ್ಟಿದ್ದು, ಕಾಕತಾಳೀಯ ಎಂಬಂತೆ 1967ರಲ್ಲಿಯೇ ಅಂಚೆ ಚೀಟಿಯಲ್ಲಿ ರಾಮಮಂದಿರ ಉದ್ಘಾಟನೆಯ ಇಸವಿ ನಮೂದಿಸಿರುವುದು ಅಚ್ಚರಿ ಮೂಡಿಸಿದೆ.

Advertisement

2024 ಎಂದು ನೇಪಾಳಿ ಅಂಚೆ ಚೀಟಿಯ ಮೇಲೆ ಬರೆಯಲಾದ ರಾಮನವಮಿ ಇಸವಿ ಇಂಗ್ಲಿಷ್‌ ಕ್ಯಾಲೆಂಡರ್‌ ಪ್ರಕಾರ ನಮೂದಿಸಿಲ್ಲ. ಆದರೆ ಇದನ್ನು ವಿಕ್ರಮ್‌ ಸಂವತ್ಸರ ಹಿಂದೂ ಕ್ಯಾಲೆಂಡರ್‌ ಪ್ರಕಾರ ಬರೆಯಲಾಗಿದೆ. ಈ ಸಂವತ್ಸರವನ್ನು ನೇಪಾಳ ಮತ್ತು ಭಾರತದ ಇತರ ಭಾಗದಲ್ಲಿ ಬಳಸಲಾಗುತ್ತದೆ.

ಏನಿದು ವಿಕ್ರಮ ಸಂವತ್ಸರ?

ವಿಕ್ರಮ್‌ ಕ್ಯಾಲೆಂಡರ್‌ ಎಂದು ಕರೆಯಲ್ಪಡುವ ಹಿಂದೂ ಕ್ಯಾಲೆಂಡರ್‌ ಐತಿಹಾಸಿಕವಾಗಿ ಭಾರತೀಯ ಉಪಖಂಡಗಳಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಬಳಸಲ್ಪಡುತ್ತದೆ. ವಿಕ್ರಮ್‌ ಸಂವತ್‌ ಕ್ಯಾಲೆಂಡರ್‌ ಗ್ರೆಗೋರಿಯನ್‌ (ಇಂಗ್ಲಿಷ್)‌ ಕ್ಯಾಲೆಂಡರ್‌ ಗಿಂತ 57 ವರ್ಷಗಳು ಮುಂದಿರುತ್ತದೆ. ಪುರಾಣದ ಪ್ರಕಾರ, ಉಜ್ಜಯಿನಿಯ ರಾಜ ವಿಕ್ರಮಾದಿತ್ಯನು ಶಕಗಳನ್ನು ಸೋಲಿಸಿದ ನಂತರ ವಿಕ್ರಮ ಸಂವತ್ಸರ ಯುಗ ಪ್ರಾರಂಭವಾಯಿತು ಎನ್ನಲಾಗುತ್ತದೆ. ವಿಕ್ರಮ ಸಂವತ್‌ ಅನ್ನು ವಿಕ್ರಮಾದಿತ್ಯ ಪ್ರಾರಂಭಿಸಲಿಲ್ಲ ಎಂಬುದು ಹಲವಾರು ಇತಿಹಾಸಕಾರರ ಅಭಿಪ್ರಾಯವೂ ಇದೆ.

ಈ ಹಿನ್ನೆಲೆಯಲ್ಲಿ 1967ರಲ್ಲಿ ನೇಪಾಳ ಬಿಡುಗಡೆಗೊಳಿಸಿದ ವಿಕ್ರಮ್‌ ಸಂವತ್ಸರದ ಅಂಚೆ ಚೀಟಿ ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ 2024 ಅನ್ನು ಪ್ರತಿನಿಧಿಸುತ್ತದೆ. ಇದೀಗ ಕಾಕತಾಳೀಯ ಎಂಬಂತೆ ನೇಪಾಳ ಅಂಚೆ ಚೀಟಿಯಲ್ಲಿ 57 ವರ್ಷಗಳ ಹಿಂದೆಯೇ ಅಯೋಧ್ಯೆಯಲ್ಲಿ 2024ರಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ ಎಂಬುದಾಗಿ ನಮೂದಿಸಲಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ!

Advertisement

Udayavani is now on Telegram. Click here to join our channel and stay updated with the latest news.

Next