Advertisement

ವೈರಾಣು ಕೊಲ್ಲುವ ತಂತ್ರಜ್ಞಾನ

09:14 AM Jul 10, 2020 | mahesh |

ವಾಷಿಂಗ್ಟನ್‌ : ಕೋವಿಡ್ ಸೋಂಕಿಗೆ ಕಡಿವಾಣ ಹಾಕಲು ಶತ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಹೂಸ್ಟನ್‌ ವಿಶ್ವವಿದ್ಯಾಲಯದ ಸಂಶೋಧಕರು ಕೋವಿಡ್‌-19 ವೈರಾಣುವನ್ನು ಮಟ್ಟ ಹಾಕಲು ಏರ್‌ಫಿಲ್ಟರ್‌ ವಿನ್ಯಾಸಗೊಳಿಸಿದೆ. “ಕ್ಯಾಚ್‌ ಅಂಡ್‌ ಕಿಲ್‌” ಫಿಲ್ಟರ್‌ಅನ್ನು ವಿಶ್ವವಿದ್ಯಾಲಯದ ಟೆಕ್ಸಾಸ್‌ ಸೆಂಟರ್‌ಫಾರ್‌ ಸೂಪರ್‌ ಕಂಡಕ್ಟಿವಿಟಿಯ ನಿರ್ದೇಶಕ ಝಿಫೆಂಗ್‌ ರೆನ್‌ ಈ ಫಿಲ್ಟರ್‌ ವಿನ್ಯಾಸಗೊಳಿಸಿದ್ದು, ತತ್‌ಕ್ಷಣವೇ ವೈರಾಣು ಕೊಲ್ಲುತ್ತದೆ ಎಂದು ಹೇಳಿಕೊಂಡಿದ್ದಾರೆ.

Advertisement

ಹೂಸ್ಟನ್‌ ಮೂಲದ ವೈದ್ಯಕೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಸಂಸ್ಥೆ ಮತ್ತು ಇತರ ಸಂಶೋಧಕರಾದ ಮೆಡಿಸ್ಟಾರ್‌ನ ಸಿಇಒ ಮೊಂಜರ್‌ಹೌರಾನಿ ಈ ಸಂಶೋಧನೆಗೆ ಸಹಕರ ನೀಡಿದ್ದು, ಗ್ಯಾಲ್ವೆಸ್ಟನ್‌ ನ್ಯಾಷನಲ್‌ ಲ್ಯಾಬೊರೇಟರಿಯಲ್ಲಿ ನಡೆದ ವೈರಸ್‌ ಪರೀಕ್ಷೆಯಲ್ಲಿ ಕೋವಿಡ್‌-19ಕ್ಕೆ ಕಾರಣವಾಗುವ ವೈರಸ್‌ 99.8 ಶೇಕಡಾದಷ್ಟು ನಾಶವಾಗಿದೆ.

392 ಡಿಗ್ರಿ ಫ್ಯಾರನ್‌ ಹೀಟ್‌ಗೆ ಬಿಸಿಮಾಡಿದ ನಿಕಲ್‌ ಫೋಮ್‌ ನಿಂದ ತಯಾರಿಸಿದ ಫಿಲ್ಟರ್‌ಮೂಲಕ ವೈರಸ್‌ ಕೊಲ್ಲಲ್ಪಟ್ಟಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಝಿಫೆಂಗ್‌ ರೆನ್‌, ಕೋವಿಡ್‌-19 ಹರಡುವುದನ್ನು ತಡೆಯಲು ಈ ಫಿಲ್ಟರ್‌ವಿಮಾನ ನಿಲ್ದಾಣಗಳು, ವಿಮಾನಗಳು, ಕಚೇರಿ ಕಟ್ಟಡಗಳು, ಶಾಲೆಗಳು ಮತ್ತು ಹಡಗುಗಳಲ್ಲಿ ಉಪಯುಕ್ತವಾಗಲಿವೆ ಎಂದು ಹೇಳಿದರು.

“ಮೆಡಿಸ್ಟಾರ್‌ಅಧಿಕಾರಿಗಳು ಡೆಸ್ಕ್ – ಟಾಪ್‌ ಮಾದರಿಯ ಏರ್‌ಫಿಲ್ಟರ್‌ವಿನ್ಯಾಸಗೊಳಿಸುವ ಕುರಿತು ಪ್ರಸ್ತಾಪಿಸಿದ್ದು, ಇದು ಕಚೇರಿಗಳಲ್ಲಿ ಗಾಳಿ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ ವೈರಸ್‌ 70 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಬಿಸಿಯಾದ ಫಿಲ್ಟರ್‌ ಬಳಸಿ ವೈರಸ್‌ಗಳನ್ನು ಕೊಲ್ಲಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next