ಬೆಂಗಳೂರು: ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿ ರುವ ನಡುವೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ವೈರಲ್ ಫೀವರ್ ಬಿಟ್ಟು ಬಿಡದೇ ಕಾಡುತ್ತಿದೆ.
ಸಾಮಾನ್ಯವಾಗಿ ವೈರಲ್ ಫೀವರ್ ಪ್ರಕರಣ ಗಳು ಜೂನ್-ಸೆಪ್ಟೆಂಬರ್ ತಿಂಗಳಲ್ಲಿ ವರದಿ ಯಾಗಿ, ಅಕ್ಟೋಬರ್ ಅಂತ್ಯಕ್ಕೆ ಕೊನೆಯಾಗುತ್ತದೆ. ಆದರೆ, ಈ ಬಾರಿ ಬೆಂಗಳೂರು ನಗರದಲ್ಲಿ ಬಿಸಿಲು ಹಾಗೂ ಚಳಿ, ಮಳೆಯ ಜತೆಯಾಟದಿಂದ ಮಳೆಗಾಲದ ಮುಕ್ತಾಯದ ಬಳಿಕವೂ ವೈರಲ್ ಫೀವರ್ ಅಬ್ಬರ ಹೆಚ್ಚಾಗಿದೆ. ಕುಟುಂಬ ಸದಸ್ಯನೊಬ್ಬನಿಗೆ ಕಾಣಿಸಿಕೊಂಡ ಜ್ವರ-ಶೀತ ಬಳಿಕ ಒಬ್ಬೊಬ್ಬರಿಗೆ ಹರಡುತ್ತಿದೆ.
ವೈರಾಣು ಲಕ್ಷಣಗಳೇನು?: ಈ ವೈರಾಣು ಜ್ವರಕ್ಕೆ ತುತ್ತಾದ ವರಿಗೆ 3ರಿಂದ 5ದಿನಗಳ ವರೆಗೆ ವಿಪರೀತ ಚಳಿ ಜ್ವರ, ನೆಗಡಿ, ಕೆಮ್ಮು, ತಲೆ ನೋವು, ಮೈ ಕೈ ನೋವು, ಸ್ನಾಯು ಸೆಳೆತ, ಗಂಟು ಗಳಲ್ಲಿ ನೋವು, ಉಸಿರಾಟದಲ್ಲಿ ತೊಡಕು, ವಾಂತಿ ಭೇದಿ, ಹೊಟ್ಟೆ ನೋವು, ಕಣ್ಣಿನಲ್ಲಿ ನೀರು ಸೋರಿಕೆ ಹಾಗೂ ಕಣ್ಣು ಕೆಂಪಾ ಗುವುದು ವೈರಲ್ ಫೀವರ್ ಲಕ್ಷಣವಾಗಿದೆ. ಮೇಲ್ನೋಟಕ್ಕೆ ಕೋವಿಡ್, ಡೆಂಘೀ ಲಕ್ಷಣಗಳಾಗಿ ಕಂಡು ಬರುತ್ತಿದ್ದರೂ, ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ವರದಿ ದಾಖಲಾಗುತ್ತಿದೆ. ಜ್ವರದ ಜತೆ ನೆಗಡಿಯೂ ಇರುವ ಕಾರಣ ಸೀನುವ ಸಂದರ್ಭ ಇಡೀ ಪರಿಸರದಲ್ಲಿ ಜ್ವರದ ವೈರಸ್ ಹರಡುತ್ತಿದೆ.
ಅಪಾಯವೇನು?: ವೈರಾಣು ಜ್ವರ ಸಾಮಾನ್ಯ ವಾಗಿ 3 ರಿಂದ 5ದಿನದೊಳಗೆ ಕಡಿಮೆಯಾಗುತ್ತದೆ. ಇದು ಜೀವಕ್ಕೆ ಹಾನಿ ಮಾಡದ ಜ್ವರ. ಆದರೆ, ಬೇರೆ ಬೇರೆ ಅನಾರೋಗ್ಯದಿಂದ ಬಳಲುತ್ತಿರುವ ವರು ಈ ವೈರಾಣು ಜ್ವರಕ್ಕೆ ತುತ್ತಾಗಿ ಸರಿಯಾದ ಸಮಯಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯದೇ ಹೋದರೆ ಮರಣ ಸಂಭವಿಸುವ ಸಾಧ್ಯಗಳಿವೆ. ಈ ವೈರಾಣುಗೆ ತುತ್ತಾದ ಮಕ್ಕಳಲ್ಲಿ ಆರ್‌ಎಸ್‌ವಿ (ಉಸಿ ರಾಟದ ಸೆನ್ಸಿಟಿಯಲ್ ವೈರಸ್) ದೃಢ ವಾಗುತ್ತಿದ್ದು, ಸೋಂಕು ಉಲ್ಬಣಿಸಿದರೆ ವೈರಲ್ ನ್ಯುಮೊನಿಯಾಗೆ ಪರಿವರ್ತನೆ ಯಾಗಲಿದೆ.
ಕ್ಲಿನಕ್‌ಗಳ ಮುಂದೆ ಕ್ಯೂ: ನಗರದ ಖಾಸಗಿ ಕ್ಲಿನಿಕ್‌ಗಳಲ್ಲಿ ಕಳೆದ 10 ದಿನ ಗಳಿಂದ ಜ್ವರಕ್ಕೆ ಔಷಧಕ್ಕೆಂದು ಬರುತ್ತಿರು ವವರ ಪ್ರಮಾಣ ಹೆಚ್ಚಿದೆ. ಇನ್ನೂ ನಗರದ ಸರ್ಕಾರಿ ಆಸ್ಪತ್ರೆಗಳಾದ ಕೆಸಿ ಜನರಲ್, ಬೌರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆ, ನಮ್ಮ ಕ್ಲಿನಿಕ್‌ಗಳ ಒಪಿಡಿ ರೋಗಿಗಳ ಸಂಖ್ಯೆ ಏರಿಕೆ ಕಂಡು ಬಂದಿದೆ.
ಮೆಡಿಕಲ್ ಮೊರೆ: ವೈರಲ್ ಫೀವರ್ ಕಾಣಿಸಿ ಕೊಳ್ಳುತ್ತಿ ರುವುದರಿಂದ ಅನೇಕರು ವೈದ್ಯರ ಬಳಿಗೆ ಹೋಗದೇ ಮೆಡಿಕಲ್‌ಗಳಿಗೆ ತೆರಳಿ ಸ್ವಯಂ ಔಷಧ ಪಡೆದುಕೊಳ್ಳುತ್ತಿರುವುದು ಹೆಚ್ಚಾಗು ತಿ ¤ದೆ. ಇದರಿಂದ ಬೇರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ.
ಮುನ್ನೆಚ್ಚರಿಕೆ ಕ್ರಮಗಳೇನು?:
ಕಡ್ಡಾಯ ಮಾಸ್ಕ್ ಧಾರಣೆ
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
ಕೈಗಳನ್ನು ಸ್ಯಾನಿಟೈಸ್‌ಗೆ ಒಳಪಡಿಸಬೇಕು
ಹೆಚ್ಚು ಜನರು ಸೇರುವ ಪ್ರದೇಶದಿಂದ ದೂರವಿರಿ.
ಪೌಷ್ಟಿಕಾಂಶ ಆಹಾರ ಸೇವನೆ
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು
ಸ್ವಯಂ ಚಿಕಿತ್ಸೆ ಬೇಡ
ಪ್ರಸ್ತುತ ಆಸ್ಪತ್ರೆಗೆ ಜ್ವರದಿಂದ ಚಿಕಿತ್ಸೆಗೆ ಬರುವ 10 ಮಂದಿಯಲ್ಲಿ 7 ಜನರಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಪೌಷ್ಟಿಕಾಂಶ ಆಹಾರ ಸೇವಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು. ಸ್ವಯಂ ಚಿಕಿತ್ಸೆ ಉತ್ತಮವಲ್ಲ.
-ಡಾ.ಶ್ರೀದೇವಿ, ಸಮಾಲೋಚನ ವೈದ್ಯರು, ಮಣಿಪಾಲ ಆಸ್ಪತ್ರೆ, ಯಶವಂತಪುರ.