Advertisement

ಫೂಟ್ ಓವರ್‌ ಬ್ರಿಡ್ಜ್ ನಲ್ಲಿ ಆಟೋ ಚಲಾಯಿಸಿ ಸುದ್ದಿಯಾದ ಚಾಲಕ; ವಿಡಿಯೋ ವೈರಲ್‌

10:14 PM Aug 19, 2022 | Team Udayavani |

ಮಹಾರಾಷ್ಟ್ರ: ಜನರು ರಸ್ತೆ ದಾಟಲು ಬಳಸುವ ಫೂಟ್ ಓವರ್‌ ಬ್ರಿಡ್ಜ್ ನಲ್ಲಿ ಚಾಲಕನೊಬ್ಬ ಆಟೋ ಚಲಾಯಿಸಿ ಸುದ್ದಿಯಾಗಿದ್ದಾನೆ.

Advertisement

ಮುಂಬೈ-ಅಹ್ಮದಾಬಾದ್‌ ರಾಷ್ಟ್ರೀಯ ಹೆದ್ದಾರಿಯ ನಡುವೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಪಾದಚಾರಿಗಳ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಪಾದಚಾರಿ ಮೇಲ್ಸೇತುವೆಯಲ್ಲಿ ಈ ಆಟೋ ಸಂಚರಿಸಿದೆ.

ಅದರ ವಿಡಿಯೋ ಮತ್ತು ಫೋಟೋಗಳು ವೈರಲ್‌ ಆಗಿವೆ. ಈ ವಿಚಾರಕ್ಕೆ ಸಂಬಂಧಿಸಿ ಪರ-ವಿರೋಧ ಚರ್ಚೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next