ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯ ತಾಲಗುಂಡ ಎಂಬ ಗ್ರಾಮದಲ್ಲಿ ಶನಿವಾರದಂದು ಭುಗಿಲೆದ್ದ ರಾಜಕೀಯ ದಳ್ಳುರಿಗೆ ಹಲವಾರು ದೋಣಿಗಳು, ನಾಗರಿಕರ ಬೈಕುಗಳು ಹಾಗೂ ಕೆಲವು ಮನೆಗಳು ಸುಟ್ಟು ಭಸ್ಮವಾಗಿವೆ.
ಘಟನೆಗೆ ಸಂಬಂಧಿಸಿದಂತೆ 43 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ, ಅಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನ ಸಹೋದರನ ಹತ್ಯೆ ನಡೆದಿದ್ದು, ಅದರ ಬೆನ್ನಿಗೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಸಾಗರದ ತೀರದಲ್ಲಿ ನಿಂತಿದ್ದ ಹಲವಾರು ದೋಣಿಗಳಿಗೆ, ಬೈಕುಗಳಿಗೆ ಹಾಗೂ ಕೆಲವು ಮನೆಗಳಿಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಬೆಂಕಿ ಆರಿ ಸಲು ಬಂದ ಅಗ್ನಿಶಾಮಕ ದಳದವರು ಬೆಂಕಿಯ ಝಳ ಹಾಗೂ ದಟ್ಟ ಹೊಗೆಯಿಂದಾಗಿ ದೋಣಿ ಗಳ ಹತ್ತಿರಕ್ಕೂ ಹೋಗದಂತಾಗಿ ಅಸಹಾಯಕರಾಗಿ ನಿಂತಿದ್ದರು.
ವೈಷಮ್ಯದ ಕೊಲೆ: ಸುಮಾರು ಮೂರು ವರ್ಷಗಳಿಂದ ತಡೆ ಹಿಡಿಯಲಾಗಿದ್ದ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಕಳೆದ ವರ್ಷ ನಡೆಸಲಾಗಿತ್ತು. ಆಗ ಎರಡು ಬಣಗಳ ಮಧ್ಯೆ ಹುಟ್ಟಿದ್ದ ದ್ವೇಷದಿಂದ ಗ್ರಾ.ಪಂ. ಸದಸ್ಯನ ಸಹೋ ದರ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.