Advertisement

ನಂಬಿಕೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ 

11:23 AM Aug 27, 2017 | |

ಹೊಸದಿಲ್ಲಿ : ಡೇರಾ ಸಚ್ಚಾ ಸೌದಾ ಮುಖ್ಯಸ್ಥ  ರಾಮ್‌ ರಹೀಮ್‌ ಸಿಂಗ್‌ ಅತ್ಯಾಚಾರ ಅಪರಾಧಿಯಾಗಿ ಜೈಲು ಪಾಲಾದ ಬೆನ್ನಲ್ಲೇ ವ್ಯಾಪಕ ಹಿಂಸಾಚಾರಕ್ಕಿಳಿದರುವ ಬೆಂಬಲಿಗರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಠಿಣ ಎಚ್ಚರಿಕೆ ನೀಡಿದ್ದಾರೆ.

Advertisement

ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ ‘ನಮ್ಮ ದೇಶದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ. ಇದು ಬುದ್ಧನ ನಾಡು, ಮಹಾತ್ಮಾ ಗಾಂಧೀಜಿಯವರು ನಾಡು, ಇದು ಸರ್ದಾರ್‌ ವಲ್ಲಭಾಭಾಯಿ ಪಟೇಲ್‌ ಅವರ ನಾಡು. ಅಹಿಂಸಾ ಪರಮೋ ಧರ್ಮ ನಮ್ಮ ಧ್ಯೇಯ’ ಎಂದರು.

‘ನಂಬಿಕೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ.ವ್ಯಕ್ತಿಯ ಬಗೆಗಾಗಲಿ , ವಿಚಾರ ಧಾರೆಯ ಬಗೆಗಾಗಲಿ, ಪರಂಪರೆ ಬಗೆಗಾಗಲಿ ಅಂಧಶೃದ್ಧೆಯಿಂದ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರ ನಡೆಸುವುವವರನ್ನು ದೇಶವೂ ಒಪ್ಪುವುದಿಲ್ಲ, ಸರ್ಕಾರವೂ ಒಪ್ಪುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಪರಾಧಿಗಳಿಗೆ ಕಾನೂನು  ಶಿಕ್ಷೆ ನೀಡುತ್ತದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next