Advertisement

ಅತಿಕ್ರಮಣ ತೆರವು ಭರವಸೆ ಪ್ರತಿಭಟನೆ ವಾಪಸ್‌

12:52 PM Jan 18, 2020 | Suhan S |

ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಸಕಾರಿ ಗೋಮಾಳ 147 ಎಕರೆ ಜಮೀನು ಅಳತೆ ಮಾಡಿ ಅತಿಕ್ರಮಣ ತೆರವುಗೊಳಿಸುವ ಚಿಕ್ಕೋಡಿ ವಿಭಾಗಾಧಿಕಾರಿ ಭರವಸೆ ಮೇರೆಗೆ ಇಲ್ಲಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಹಿಂಪಡೆಯಲಾಯಿತು.

Advertisement

ಇಲ್ಲಿಯ ಪುರಸಭೆ ಆವರಣದಲ್ಲಿ ಸರ್ಕಾರಿ ಗೋಮಾಳ ಅತಿಕ್ರಮಣ ತೆರವುಗೊಳಿಸಿ ಸರ್ಕಾರದಿಂದ ಪಟ್ಟಣಕ್ಕೆ ಬೇಕಾದ ಬಸ್‌ ತಂಗುದಾಣ, ಉಪ ಪೊಲೀಸ್‌ ಠಾಣೆ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಆವರಣ ಗೋಡೆ, ಹಾಗೂ ಇನ್ನಿತರ ಮೂಲ ಸೌಕರ್ಯಕ್ಕೆ ಅವಶ್ಯ ಜಾಗ ನಿಗದಿಪಡಿಸುವಂತೆ ಆಮರಣ ಉಪವಾಸ ಕೈಕೊಂಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಸರಕಾರಿ ಆಸ್ತಿ ನಮ್ಮ ಆಸ್ತಿಯಾಗಿದ್ದು, ಅದರ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಬಂದೋಬಸ್ತ್ ಏರ್ಪಡಿಸಿ ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ತಿ ಮಾಡಲಾಗುವುದು. ತಾವು ಈ ಆಮರಣ ಉಪವಾಸ ಕೈಬಿಟ್ಟು ಸಹಕರಿಸಬೇಕು ಎಂದರು.

ಉಪವಾಸ ನಿರತ ಸುರೇಶ ಹೊಸಪೇಟಿ, ಭೀಮಪ್ಪ ಬನಶಂಕರಿ, ಹಾಗೂ ಇತರರು ಮಾತನಾಡಿ, ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಉಪವಾಸದಿಂದ ಹಿಂದೆ ಸರಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್‌‌ ಚಂದ್ರಕಾಂತ ಭಜಂತ್ರಿ, ಕಂದಾಯ ಅಧಿಕಾರಿಗಳಾದ ದಾನ್ನೋಳ್ಳಿ, ಸಿದ್ದು ಹತ್ತರಗಿ, ಪುರಸಭೆ ಮುಖ್ಯಾಧಿಕಾರಿಜಿ.ಬಿ.ಡಂಭಳ, ಉಪವಾಸ ನಿರತ ಪುರಸಭೆ ಸದಸ್ಯರಾದ ವಿಠuಲ ಯಡವಣ್ಣವರ, ಮಹಾವೀರ ಕುರಾಡೆ, ಪದ್ಮಣ್ಣ ಕುರಾಡೆ, ಕರೆಪ್ಪಮಂಟೂರ, ಚಂದು ಗೌಲತ್ತನವರ, ಮುಖಂಡರಾದ ಹಣಮಂತ ಬಾಬಣ್ಣವರ, ಸುಖದೇವ ಕರಿಭೀಮಗೋಳ ಉಪಸ್ಥಿತರಿದ್ದರು.

ಹಾರೂಗೇರಿ ಪೊಲೀಸ್‌ ಠಾಣೆಯ ಪಿಎಸ್‌ಐ ಯಮನಪ್ಪ ಮಾಂಗ ಸೂಕ್ತ ಬಂದೋಬಸ್‌ ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next