Advertisement

ದೌರ್ಜನ್ಯ ಪ್ರಕರಣ : 53.62 ಲಕ್ಷ ಪರಿಹಾರ ವಿತರಣೆ

02:35 PM Jun 27, 2020 | Suhan S |

ಬಾಗಲಕೋಟೆ: ಪ್ರಸಕ್ತ ಸಾಲಿಗೆ ಏ. 1ರಿಂದ ಮೇ 31ರವರೆಗೆ 13 ದೌರ್ಜನ್ಯ ಪ್ರಕರಣಗಳಲ್ಲಿ ಒಟ್ಟು 53.62 ಲಕ್ಷ ರೂ.ಗಳ ಪರಿಹಾರ ಧನವನ್ನು ವಿತರಿಸಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ದೌರ್ಜನ್ಯ ಪ್ರಕರಣಗಳ ತನಿಖೆ ಚುರುಕುಗೊಳಿಸಬೇಕು. ಎಫ್‌ಐಆರ್‌ ಹಂತದಲ್ಲಿರುವ 9 ಪ್ರಕರಣ ಹಾಗೂ ದೋಷಾರೋಪಣೆ ಪಟ್ಟಿ ಸಲ್ಲಿಸಿದ ನಂತರದ 4 ಪ್ರಕರಣಗಳಿಗೆ ಪರಿಹಾರಧನ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

ಮೊರಾರ್ಜಿ ಶಾಲೆ ನಿರ್ಮಾಣಕ್ಕೆ ಜಾಗ: ಜಿಲ್ಲೆಗೆ ಹೊಸದಾಗಿ ಮಂಜೂರಾದ ಮೊರಾರ್ಜಿ ದೇಸಾಯಿ ಹಾಗೂ ಇತರೆ ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಜಮೀನು ಗುರುತಿಸಿದ್ದು, ಮಂಜೂರಾತಿ ನೀಡಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿರುವುದಾಗಿ ತಿಳಿಸಿದರು. ಜಿಲ್ಲೆಯ ವಿವಿಧೆಡೆ ನಿರ್ಮಾಣಗೊಳ್ಳುತ್ತಿರುವ ಡಾ|ಬಿ.ಆರ್‌ ಅಂಬೇಡ್ಕರ ಭವನ, ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದರೂ ಸಹ ಇನ್ನು ಪೂರ್ಣಗೊಂಡಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ತುರ್ತಾಗಿ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು. ಇದಕ್ಕೆ ಸಮಿತಿಯ ಸದಸ್ಯರು ಅಧಿಕಾರಿಗಳ ಬೇವಾಬ್ದಾರಿ ಕಂಡು ಅಸಮಾಧಾನಗೊಂಡರು.

ಕೊಳಬಾವಿ ವಿದ್ಯುತ್ತಿಕರಣಕ್ಕೆ ಸೂಚನೆ: ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ ಪರಿಶಿಷ್ಟ ಜಾತಿ ವರ್ಗದ ಒಟ್ಟು 157 ಕೊಳವೆ ಬಾವಿಗೆ ವಿದ್ಯುದ್ದೀಕರಣ ಬಾಕಿ ಉಳಿದಿವೆ. ಬಾಕಿ ಉಳಿದ ಪರಿಶಿಷ್ಟ ಪಂಗಡದ 4 ಕೊಳವೆ ಬಾವಿ ಕೊರೆದು ವಿದ್ಯುದ್ದೀಕರಣಗೊಳಿಸಲಾಗಿರುವುದಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ನಿಗಮದ ಜಿಲ್ಲಾ ವ್ಯವಸ್ಥಾಪಕರುಸಭೆಗೆ ತಿಳಿಸಿದಾಗ ಬಾಕಿ ಕೊಳವೆಬಾವಿ ವಿದ್ಯುದ್ದೀಕರಣ ಪೂರ್ಣಗೊಳಿಸಲು ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ಎ.ಜಿ ತೋಟದ, ಸಮಾಜ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಸಮಿತಿಯ ಸದಸ್ಯರಾದ ಡಾ|ಎಂ.ಎಚ್‌ ಚಲವಾದಿ, ದುಂಡಪ್ಪ ಸಾವಳಗಿ, ಯಲ್ಲಪ್ಪ ಮೇತ್ರಿ, ಮುತ್ತಣ್ಣ ಬೆಣ್ಣೂರ, ಶಂಭುಗೌಡ ಪಾಟೀಲ, ಸುಭಾಸ ಗಸ್ತಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next