Advertisement

Gangolli ಪತ್ನಿಗೆ ಹಿಂಸೆ; ಪತಿಯ ವಿರುದ್ಧ ಪ್ರಕರಣ ದಾಖಲು

12:13 AM May 27, 2024 | Team Udayavani |

ಗಂಗೊಳ್ಳಿ: ಇಲ್ಲಿನ ಜನತಾ ಕಾಲನಿ ನಿವಾಸಿ ಸುಮಿತ್ರಾ (35) ಅವರು ಪತಿ ನಾಗರಾಜ್‌ ಅವರ ಮೇಲೆ ಚಿನ್ನಾಭರಣ ಮಾರಾಟ, ಅಡಮಾನ ಇಟ್ಟು ಹಿಂಸೆ ನೀಡಿದ ಬಗ್ಗೆ ದೂರು ನೀಡಿದ್ದಾರೆ.

Advertisement

2018ರಲ್ಲಿ ನಾಗರಾಜ್‌ ಅವರ ಜತೆ ಮದುವೆಯಾಗಿದ್ದು, ಪತಿ ಜತೆ ಅವರ ಅಕ್ಕ ಹೆರಿಯಕ್ಕ, ಶಾಂತಾ, ಭಾವ ರಾಮ ಅವರು ಗಲಾಟೆ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು. ಮದುವೆ ಸಮಯ 6 ಪವನ್‌ ಚಿನ್ನಾಭರಣ, 1 ಲಕ್ಷ ರೂ. ನೀಡಲಾಗಿತ್ತು.

2022ರಲ್ಲಿ ನನ್ನ 3.5 ಪವನ್‌ನ ಚಿನ್ನದ ಕರಿಮಣಿ ಸರವನ್ನು ಪತಿ ಮಾರಾಟ ಮಾಡಿದ್ದು 2.5 ಪವನ್‌ನ ಚಿನ್ನದ ನೆಕ್ಲೇಸ್‌, ಉಂಗುರವನ್ನು ನನಗೆ ಗೊತ್ತಾಗದೇ ಸೊಸೈಟಿಯಲ್ಲಿ ಅಡವಿಟ್ಟಿದ್ದರು. ಬಿಡಿಸಿಕೊಡುವಂತೆ ತಿಳಿಸಿದಾಗ ಬೈದು ಹಲ್ಲೆ ಮಾಡಿದ್ದಾರಲ್ಲದೇ ಮನೆಯಿಂದ ಹೊರಹಾಕಿದ್ದಾರೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next