Advertisement

Vehicle Rules: ವಾಹನ ನಿಯಮ ಉಲ್ಲಂಘನೆ- ಸೂಕ್ತ ಕ್ರಮ

08:42 PM May 27, 2023 | Team Udayavani |

ಉಡುಪಿ: ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿನಿಂದ ಕಾರ್ಯಾಚರಣೆ ನಡೆಸಿ ಅನಧಿಕೃತ ಸೈಲೆನ್ಸರ್‌ ಅಳವಡಿಕೆ ಮಾಡಿದ್ದ ವಾಹನಗಳಿಗೆ ದಂಡ ವಿಧಿಸಿ ವಶಪಡಿಸಿಕೊಂಡ ಸೈಲೆನ್ಸರ್‌ಗಳನ್ನು ಶನಿವಾರ ಜೆಸಿಬಿ ವಾಹನ ಬಳಸಿ ನಿಷ್ಕ್ರಿಯಗೊಳಿಸಲಾಯಿತು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ನಿರ್ದೇಶನದ ಮೇರೆಗೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ಧಲಿಂಗಪ್ಪ ಹಾಗೂ ಉಡುಪಿ ಡಿವೈಎಸ್‌ಪಿ ದಿನಕರ ಮತ್ತು ಮಣಿಪಾಲ ಠಾಣಾಧಿಕಾರಿ ದೇವರಾಜ ಟಿವಿ ಉಪಸ್ಥಿತಿಯಲ್ಲಿ ಕಳೆದ 6 ತಿಂಗಳಿನಿಂದ ಮಣಿಪಾಲದ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿತ್ತು. ಮುಖ್ಯವಾಗಿ ವಾಹನಗಳಲ್ಲಿ ಅನಧಿಕೃತ ಸೈಲೆನ್ಸರ್‌ ಅಳವಡಿಸಿದ ಪರಿಣಾಮ ಕರ್ಕಶ ಶಬ್ದದಿಂದಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿತ್ತು. ಒಟ್ಟು 60ರಿಂದ 70 ವಾಹನಗಳಲ್ಲಿ ಅಳವಡಿಕೆ ಮಾಡಿದ್ದ ಅನಧಿಕೃತ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ತಲಾ 500 ರೂ. ನಂತೆ ದಂಡ ವಿಧಿಸಲಾಗಿತ್ತು. ಆಲೆóàಷನ್‌ ಮಾಡಿಸಿದ್ದ 4 ವಾಹನಗಳನ್ನು ವಶಪಡಿಸಿ ಆರ್‌ಟಿಓ ಮೂಲಕ 60 ಸಾವಿರ ರೂ. ದಂಡ ವಿಧಿಸಲಾಗಿದೆ. ವಾರಾಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ವ್ಹೀಲಿಂಗ್‌ ನಡೆಸುವುದು ಹಾಗೂ ನಿಯಮಾವಳಿ ಉಲ್ಲಂ ಸುವವರ ಮೇಲೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ಧಲಿಂಗಪ್ಪ ಹಾಗೂ ಠಾಣಾಧಿಕಾರಿ ದೇವರಾಜ ಟಿ.ವಿ.ತಿಳಿಸಿದರು. ಡಿವೈಎಸ್‌ಪಿ ದಿನಕರ, ಎಎಸ್‌ಐ ನವೀನ್‌ ನಾಯ್ಕ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next