Advertisement

ನಗರದಲ್ಲಿ ಮೊದಲ ದಿನ 72.66 ಲಕ್ಷ ರೂ. ಟ್ರಾಫಿಕ್ ದಂಡ ಸಂಗ್ರಹ 

11:28 AM Mar 05, 2023 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಶೇ.50ರಷ್ಟು ರಿಯಾಯಿತಿ ದಂಡಕ್ಕೆ ಮತ್ತೂಮ್ಮೆ ಸರ್ಕಾರವು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವೇ 22,334 ಕೇಸ್‌ ಸಂಬಂಧ 72.66 ಲಕ್ಷ ರೂ. ದಂಡ ಸಂಗ್ರಹವಾಗಿದೆ.

Advertisement

ಫೆ.11ರೊಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಬಂಧ ಮಾ.4ರಿಂದ ಮಾ.18ರ ವರೆಗೆ ಅಂದರೆ 15 ದಿನಗಳ ಕಾಲ ಸಾರ್ವಜನಿಕರು ಬಾಕಿ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಕರ್ನಾಟಕ ಸ್ಟೇಟ್‌ ಪೊಲೀಸ್‌ (ಕೆಎಸ್‌ಪಿ) ಆ್ಯಪ್‌, ಕರ್ನಾಟಕ ಒನ್‌ /ಬೆಂಗಳೂರು ಒನ್‌ ವೆಬ್‌ಸೈಟ್‌, ಪೇ ಟಿಎಂ ಆ್ಯಪ್‌, ಸಮೀಪದ ಸಂಚಾರ ಪೊಲೀಸ್‌ ಠಾಣೆ, ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದ ಮೊದಲ ಮಹಡಿಯಲ್ಲಿ ದಣಂಡ ಪಾವತಿಗೆ ಅವಕಾಶವಿದೆ.

ಕಳೆದ ಬಾರಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೇವಲ 9 ದಿನಗಳಲ್ಲಿ 43.35 ಲಕ್ಷ ಪ್ರಕರಣಗಳಿಂದ 126.87 ಕೋಟಿ ರೂ. ದಂಡ ಸಂಗ್ರಹವಾಗಿತ್ತು. ಈ ಬಾರಿ ದಂಡ ಪಾವತಿಗೆ 15 ದಿನಗಳ ಕಾಲ ಕಾಲಾವಕಾಶ ನೀಡಿರುವುದರಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದದಲ್ಲಿ ದಂಡ ಸಂಗ್ರಹವಾ ಗುವ ಸಾಧ್ಯತೆಗಳಿವೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ.080 22942 883 ಅಥವಾ 080 22943381 ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next