Advertisement

Moodabidri: ಸಂಚಾರ ನಿಯಮ ಉಲ್ಲಂಘನೆ; ಪೊಲೀಸರಿಂದ ಕ್ರಮ

04:20 PM May 24, 2023 | Team Udayavani |

ಮೂಡುಬಿದಿರೆ: ಬಸ್‌ನಿಲ್ದಾಣದ ಪ್ರವೇಶ ಭಾಗದಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಚಾಲಕರು ಕೊನೆಗೂ ಪೊಲೀಸರು ತಡೆದು ಕಾನೂನು ಕ್ರಮ ಜರಗಿಸತೊಡಗಿದ್ದಾರೆ.

Advertisement

ಶನಿವಾರ ಉದಯವಾಣಿ ಸುದಿನದಲ್ಲಿ ಮೂಡುಬಿದಿರೆ ಪೇಟೆಯಲ್ಲಿ, ಅದರಲ್ಲೂ ಬಸ್‌ ನಿಲ್ದಾಣದ ಪ್ರವೇಶ ಭಾಗದಲ್ಲಿ ದ್ವಿಚಕ್ರ, ತ್ರಿಚಕ್ರ, ಚತುಷcಕ್ರ ವಾಹನಗಳು ಎತ್ತರದಲ್ಲಿರುವ ಬಸ್‌ನಿಲ್ದಾಣದ ಕಡೆಯಿಂದ ಕೆಳಗಿಳಿದು ರಾಷ್ಟ್ರೀಯ ಹೆದ್ದಾರಿ ತಲುಪಲು ವೇಗವಾಗಿ ಬರುತ್ತಿರುವುದರ ಬಗ್ಗೆ ಸಚಿತ್ರ ವರದಿ ಮಾಡಲಾಗಿತ್ತು. ಶನಿವಾರ ಮತ್ತೆ ಪರಿವೀಕ್ಷಿಸಿದಾಗ ಹಿಂದಿನ ದಿನದ ಸ್ಥಿತಿ ಗತಿಯೇ ಮುಂದುವರಿದಿತ್ತು. ಈ ಬಗ್ಗೆ ಸೋಮವಾರದ ಸುದಿನದಲ್ಲಿ ಮತ್ತೆ ವರದಿ ಮಾಡಲಾಗಿತ್ತು.

ಇದೆಲ್ಲದಕ್ಕೆ ಸ್ಪಂದಿಸಿದ ಮೂಡುಬಿದಿರೆ ಪೊಲೀಸರು ಮಂಗಳವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು, ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಚಾಲಕರನ್ನು ತಡೆದು ಕ್ರಮ ಜರಗಿಸತೊಡಗಿರುವುದು ಕಂಡುಬಂತು.

ಇದೇ ರೀತಿ ಆಳ್ವಾಸ್‌ ಆಸ್ಪತ್ರೆ ರಸ್ತೆ ಯಲ್ಲಿಯೂ ಏಕಮುಖ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನಗಳು ಪೊಲೀಸರ ಕಣ್ಣಿಗೆ ಬಿದ್ದು ಚಾಲಕರು ಪೊಲೀಸರ ಕ್ರಮಕ್ಕೆ ಈಡಾಗಬೇಕಾಯಿತು. ಹೆಲ್ಮೆಟ್‌ ಧರಿಸದ ವಾಹನ ಚಾಲಕರು, ರಾಂಗ್‌ ಸೈಡ್‌ನ‌ಲ್ಲಿ ಸಾಗುವವರು, ಚಾಲನ ಅನುಜ್ಞಾ ಪತ್ರ ಇಲ್ಲದೆ ಚಾಹನ ಚಲಾಯಿಸುವವರು, ವಿಶೇಷವಾಗಿ ಬಸ್‌ನಿಲ್ದಾಣದಿಂದ ಕೆಳಗೆ ಏಕಮುಖ ಸಂಚಾರ ನಿಯಮ ಉಲ್ಲಂಘಿಸಿ ಇಳಿದವರು, ಇದೇ ರೀತಿ ಆಳ್ವಾಸ್‌ ಆಸ್ಪತ್ರೆ ರಸ್ತೆಯಲ್ಲಿ ಯೂ ಹಲವಾರು ನಿಯಮ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಪೊಲೀಸರು ಕ್ರಮಕೈಗೊಂಡರು. ಎರಡು ತಂಡಗಳಲ್ಲಿ 15 ಮಂದಿ ಪೊಲೀಸ್‌ ಅಧಿಕಾರಿಗಳು, ಸಿಬಂದಿ 25ಕ್ಕೂ ಅಧಿಕ ಪ್ರಕರಣಗಳನ್ನು ಪರಿಶೀಲಿಸಿ ದಂಡ ಮತ್ತು ಇತರ ಕ್ರಮ ಜರಗಿಸಿದರು. ಸಿಬಂದಿ ಕೊರತೆ ಇದ್ದರೂ ಇದ್ದುದರಲ್ಲೇ ಹೊಂದಾಣಿಕೆ ಮಾಡಿಕೊಂಡು ಕಾರ್ಯಾ ಚ ರಣೆ ನಡೆ ಸಿದ ಪೊಲೀಸರ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next