Advertisement

ಕಸಾಪ ನಿಬಂಧನೆ ಉಲ್ಲಂಘನೆ: ಕ್ರಮಕ್ಕೆ ಒತ್ತಾಯ

12:09 PM Mar 13, 2022 | Team Udayavani |

ಶಹಾಬಾದ: ತಾಲೂಕು ಕಸಾಪ ಅಧ್ಯಕ್ಷರ ನೇಮಕದಲ್ಲಿ ಪರಿಷತ್‌ ನಿಬಂಧನೆಗಳನ್ನು ಉಲ್ಲಂಘಿಸಿದಕ್ಕೆ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶನಿವಾರ ನಗರ ಕಸಾಪ ಸದಸ್ಯರು ಹಾಗೂ ವಿವಿಧ ಸಂಘಟನೆಯವರು ಕಸಾಪ ರಾಜ್ಯಧ್ಯಕ್ಷರಿಗೆ ಹಾಗೂ ಜಿಲ್ಲಾಕಾರಿಗಳಿಗೆ ಕಂದಾಯ ಅಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಸದಸ್ಯ ಪೂಜಪ್ಪ ಮೇತ್ರೆ, ನಗರ ಕಸಾಪ ಅಧ್ಯಕ್ಷರ ಆಯ್ಕೆಯಲ್ಲಿ ಪರಿಷತ್‌ನ ನಿಬಂಧನೆಗಳ ಉಲ್ಲಂಘನೆಯಾಗಿದೆ. ಜಿಲ್ಲಾಧ್ಯಕ್ಷರು ಸರ್ವಾಧಿಕಾರಿಯಾಗಿ ನಡೆದುಕೊಂಡಿದ್ದಾರೆ. ಕಸಾಪ ನಿಬಂಧನೆ 15ರ ಪ್ರಕಾರ ತಾಲೂಕು ಘಟಕಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಜಿಲ್ಲಾಧ್ಯಕ್ಷರು ಆಯಾ ಪ್ರತಿ ತಾಲೂಕಿನ ಸದಸ್ಯರೊಡನೆ ಸಮಾಲೋಚನೆ ನಡೆಸಿ ಹಾಗೂ ನಿರ್ದಿಷ್ಟ ಸ್ಥಳ, ದಿನಾಂಕವನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ನೇಮಕ ಮಾಡಬೇಕು ಆದರೆ ಜಿಲ್ಲಾಧ್ಯಕ್ಷರು ಕಲಬುರಗಿಯಲ್ಲೇ ಕುಳಿತು ಈ ಕಾರ್ಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷರು ಕೂಡಲೇ ಸಭೆ ಕರೆದು ನೂತನ ತಾಲೂಕು ಅಧ್ಯಕ್ಷರನ್ನು ನೇಮಿಸಬೇಕು. ಇಲ್ಲದಿದ್ದರೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಎಚ್ಚರಿಸಿದರು.

ಕಸಾಪ ಸದಸ್ಯರಾದ ಬಸವರಾಜ ಮಯೂರ, ಪ್ರವೀಣ ರಾಜನ್‌, ಸುರೇಶ ಮೆಂಗನ, ಮರಲಿಂಗ ಕಮರಡಗಿ, ಶರಣಗೌಡ ಪಾಟೀಲ, ರಾಘವೇಂದ್ರ ಜಾಯಿ, ನರಸಿಂಹಲೂ ರಾಯಚೂರಕರ್‌, ಮಲ್ಲೇಶಿ ಭಜಂತ್ರಿ, ಸತೀಶ ಕುಮಾರ ಕೋಬಾಳಕರ್‌, ಶಿವಕುಮಾರ ಎಸ್‌ .ನಾಟೇಕಾರ, ಶಶಿಕುಮಾರ, ಶಿವಾನಂದ ಪೂಜಾರಿ, ಶಂಕರ ಕೋಟನೂರ್‌, ರಾಜಶೇಖರ ಕುಂಬಾರ, ಶರಣಯ್ಯಸ್ವಾಮಿ ಹಿರೇಮಠ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next