Advertisement

D. K. Shivakumar: ಆಮಿಷ‌; ಡಿಕೆಶಿ ವಿರುದ್ಧ ಎಫ್ಐಆರ್‌

10:35 AM Apr 21, 2024 | Team Udayavani |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಚುನಾವಣಾ ಆಯೋಗ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

Advertisement

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಪಾರ್ಟ್‌ಮೆಂಟ್‌ಗಳ ಸಮುಚ್ಚಯಕ್ಕೆ ಡಿ.ಕೆ.ಸುರೇಶ್‌ ಪರ ಪ್ರಚಾರಕ್ಕೆ ತೆರಳಿದಾಗ ಶಿವಕುಮಾರ್‌, ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 2,510 ಮನೆಗಳಿದ್ದು, 6,424 ಮತದಾರರಿದ್ದಾರೆ. ನಿಮಗೆ ಹಕ್ಕುಪತ್ರ ಹಸ್ತಾಂತರವಾಗಿಲ್ಲ, ಕಾವೇರಿ ನೀರು ಸಂಪರ್ಕ ಸಿಕ್ಕಿಲ್ಲ. ಎರಡನ್ನೂ ನಾನು ನಿಮಗೆ ಕೊಡುತ್ತೇನೆ. ನೀವು ನನಗೆ ಏನು ಕೊಡುತ್ತೀರಿ? ನಿಮ್ಮ ಅಕ್ಕ-ಪಕ್ಕದ 2-3 ಬೂತ್‌ಗಳಲ್ಲಿ ನಮ್ಮ ಪರ ಮತಗಳಿವೆ. ಉಳಿದಿರುವುದು ನಿಮ್ಮ ಬೂತ್‌ ಮಾತ್ರ. ಈಗ ಹೇಳಿ ಹಕ್ಕು ಪತ್ರ ಹಾಗೂ ಕಾವೇರಿ ನೀರು ಬೇಕಾ? ಬೇಡವಾ?’ ಎಂಬುದಾಗಿ ಶಿವಕುಮಾರ್‌ ಮತದಾರರನ್ನು ಬೆದರಿಸಿದ್ದರೆಂಬ ಆರೋಪ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್‌ ದಾಖಲಿಸಿ ಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮತ್ತೂಂದೆಡೆ ಡಿ.ಕೆ.ಶಿವಕುಮಾರ್‌ ಮತದಾರರಿಗೆ ಬೆದರಿಕೆಯೊಡ್ಡಿದ್ದ ವಿಡಿ ಯೋವನ್ನು ಬಿಜೆಪಿ ಮುಖಂಡರು, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿ ದ್ದರು. ಜತೆಗೆ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದೇ ದೂರು ಆಧರಿಸಿ ಮಾಹಿತಿ ಸಂಗ್ರಹಿಸಿಶಿವಕುವರ್‌ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next