Advertisement

ಕೋವಿಡ್ ತಡೆ ನಿಯಮ ಉಲ್ಲಂಘನೆ: 18,500 ರೂ. ದಂಡ ಸಂಗ್ರಹ

08:03 PM Sep 27, 2020 | Suhan S |

ಮಹಾನಗರ/ಸುರತ್ಕಲ್‌, ಸೆ. 26: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ, ಸುರತ್ಕಲ್‌ ಮುಂತಾದೆಡೆ ಕೊರೊನಾ ನಿಯಂತ್ರಣ ಸಂಬಂಧಿ ನಿಯಮಗಳನ್ನು ಪಾಲನೆ ಮಾಡದ ಸಾರ್ವಜನಿಕರು, ಅಂಗಡಿ ಮಾಲಕರಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದೆ. ಶನಿವಾರ ಒಂದೇ ದಿನ 18,500 ರೂ. ದಂಡ ವಿಧಿಸಲಾಗಿದೆ.

Advertisement

ಮಾಸ್ಕ್ ಧರಿಸದ 85 ಮಂದಿ, ಸಾಮಾ ಜಿಕ ಅಂತರ ಕಾಯ್ದುಕೊಳ್ಳದ 7 ಮಂದಿಗೆ ದಂಡ ವಿಧಿಸಲಾಗಿದೆ. ನಿಯಮ ಪಾಲಿಸದ ಐವರು ಅಂಗಡಿ ಮಾಲಕರ ವ್ಯಾಪಾರ ಪರವಾನಿಗೆ ವಶಪಡಿಸಿಕೊಳ್ಳಲಾಗಿದೆ. ಆರೋಗ್ಯಾಧಿಕಾರಿಯವರ ನೇತೃತ್ವದಲ್ಲಿ ಕ್ಲಾಕ್‌ ಟವರ್‌, ಹಂಪನಕಟ್ಟೆ, ಸೆಂಟ್ರಲ್‌ ಮಾರ್ಕೆಟ್‌, ಪುರಭವನ ಬಳಿ ಫೇಸ್‌ ಮಾಸ್ಕ್ ಧರಿಸದವರಿಗೆ ಒಟ್ಟು 15,500 ರೂ. ದಂಡ ವಿಧಿಸಲಾಯಿತು.

ಅಂಗಡಿ ಪರವಾನಿಗೆ ವಶ :
ಹಂಪನಕಟ್ಟೆ ಮಾರುಕಟ್ಟೆ ಪ್ರದೇಶ, ಸುರತ್ಕಲ್‌ನಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ವ್ಯಾಪಾರದಲ್ಲಿ ತೊಡಗಿದ್ದ 6 ಮಂದಿಯ ಅಂಗಡಿ ಪರವಾನಿಗೆಯನ್ನು ವಶಪಡಿಸಿಕೊಳ್ಳಲಾಯಿತು. ಕಾರ್ಯಾ ಚರಣೆಯಲ್ಲಿ ಪರಿಸರ ಅಭಿಯಂತರರಾದ ಶಬರಿನಾಥ ರೈ ಡಿ.ಎಲ್‌., ಹಿರಿಯ ಆರೋಗ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿ, ಕಿರಿಯ ಆರೋಗ್ಯ ನಿರೀಕ್ಷಕರಾದ ಭಾಸ್ಕರ ಸಿ., ಅರುಣ್‌ಕುಮಾರ್‌ ಬಿ.ಕೆ., ಸಂಜಯ್‌ಕುಮಾರ್‌, ಕಿರಣ್‌, ಗಿರಿಧರ್‌, ದೀಪಿಕಾ, ಶಾಮಿನಿ ಡಿ’ಸೋಜಾ, ಸಹನಾ ಭಾಗವಹಿಸಿದ್ದರು. ಬಂದರು, ಪಾಂಡೇಶ್ವರ ಪೊಲೀಸರ ಸಹಕಾರ ದೊಂದಿಗೆ ಕಾರ್ಯಾ ಚರಣೆ ನಡೆಯಿತು. ಸುರತ್ಕಲ್‌ ಪ್ರದೇಶದಲ್ಲಿ 3 ಸಾವಿರ ರೂ.ಗಳಷ್ಟು ದಂಡ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next