Advertisement

ನೀತಿ ಸಂಹಿತೆ ಉಲ್ಲಂಘನೆ 20.50 ಲಕ್ಷ ಕ್ಕೂ ಹೆಚ್ಚು ನಗದು ವಶ

05:11 PM Apr 08, 2023 | Team Udayavani |

ತುಮಕೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕೊರಟಗೆರೆ ಹಾಗೂ ತಿಪಟೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ ವಿವಿಧ ಪ್ರಕರಣಗಳಲ್ಲಿ ಅಕ್ರಮವಾಗಿ 20.50ಲಕ್ಷ ನಗದು ಸಾಗಿಸುವ ವೇಳೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

Advertisement

ಏ.5ರಂದು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆಯಲ್ಲಿ ಚೆಕ್‌ಪೋಸ್ಟ್‌ ಬಳಿ ಪೊಲೀಸರು ತಪಾಸಣೆ ಮಾಡಿದಾಗ 2 ಪ್ರಕರಣಗಳಲ್ಲಿ 20.50ಲಕ್ಷ ರೂ. ನಗದನ್ನುಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕೊರಟಗೆರೆ ಕ್ಷೇತ್ರ ವ್ಯಾಪ್ತಿಯ ಕಾಟೇನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಏ. 5ರಂದು ಕೆಎ-06-ಎ- 4597 ಸ್ವಿಫ್ಟ್ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ 1.50ಲಕ್ಷ ರೂ. ನಗದು ದೊರೆತಿದ್ದು, ವಾಹನದಲ್ಲಿದ್ದ ರುದ್ರೇಶ್‌ ಬಿನ್‌ ಶಿವಣ್ಣ ಅವರನ್ನು ವಿಚಾರಿಸಿದಾಗ ಸಮಂಜಸವಾದ ಉತ್ತರವನ್ನು ನೀಡದೇ ಇರುವುದರಿಂದ ನಿಯೋಜಿತ ಸ್ಥಿರ ಕಣ್ಗಾವಲು ತಂಡದ ಸದಸ್ಯರು ಹಣವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಅದೇ ರೀತಿ ತಿಪಟೂರು ನಗರ ಮಾಲ್‌ ಮುಂಭಾಗ ಏ. 5ರ ಬೆಳಿಗ್ಗೆ 11 ಗಂಟೆಗೆ ಒಂದು ಎಟಿಎಂ ವಾಹನವನ್ನು ತಪಾಸಣೆ ನಡೆಸಿದಾಗ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ 19ಲಕ್ಷ ರೂ. ಗಳನ್ನು ಸಾಗಿಸುತ್ತಿದ್ದುದು ಕಂಡು ಬಂದಿದ್ದು, ಸರಿಯಾದ ದಾಖಲೆಗಳನ್ನು ಒದಗಿಸದೇ ಇದ್ದುದರಿಂದ ಅನುಮಾನದ ಮೇರೆಗೆ ಸದರಿ ವಾಹನ ಮತ್ತು ಹಣವನ್ನು ಪೊಲೀಸ್‌ ಠಾಣೆ ವಶಕ್ಕೆ ಪಡೆಯಲಾಗಿದೆ ಎಂದು ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next