Advertisement

Bangalore: 50 ಸಾವಿರ ರೂ.ಗೂ ಹೆಚ್ಚು ದಂಡ ಉಳಿಸಿಕೊಂಡ 84 ಬೈಕ್‌, ಕಾರು ಜಪ್ತಿ

11:54 AM Feb 18, 2024 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 50 ಸಾವಿರ ರೂ.ಗಿಂತ ಅಧಿಕ ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳ ಪತ್ತೆ ಹಚ್ಚಿರುವ ದಕ್ಷಿಣ ವಿಭಾಗ ಸಂಚಾರ ಪೊಲೀಸರು, 84 ದ್ವಿಚಕ್ರ ವಾಹನ, ಒಂದು ಕಾರು ಜಪ್ತಿ ಮಾಡಿದ್ದಾರೆ.

Advertisement

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 2,681 ವಾಹನಗಳ ಮಾಲೀಕರು ತಲಾ 50 ಸಾವಿರ ರೂ.ಗಿಂತ ಹೆಚ್ಚಿನ ದಂಡ ಬಾಕಿ ಉಳಿಸಿಕೊಂಡಿ ದ್ದವರನ್ನು ವಿಶೇಷ ಕಾರ್ಯಾಚರಣೆ ನಂತರ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದರು. ವಶಕ್ಕೆ ಪಡೆದ ವಾಹನಗಳ ಮೇಲೆ ಒಟ್ಟು 10,210 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾ ಗಿದ್ದು, 1.07 ಕೋಟಿ ರೂ. ದಂಡದ ಮೊತ್ತ ಬಾಕಿ ಇರುವುದು ಪತ್ತೆಯಾಗಿದೆ.

ಈ ಬಗ್ಗೆ ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ಮಾತ ನಾಡಿ, 50 ಸಾವಿರ ಮೇಲೆ ದಂಡ ಇರುವ ವಾಹನಗಳ ಪತ್ತೆ ಹಚ್ಚಿ 84 ಬೈಕ್‌ 1 ಕಾರು ಜಪ್ತಿ ಮಾಡಲಾಗಿದೆ. ಎಫ್ಟಿವಿಆರ್‌ ಮೂಲಕ ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಪ್ರಕರಣ ದಾಖಲಿಸ ಲಾಗುತ್ತಿದೆ. ಕಾಮೆರಾಗಳ ಮೂಲಕ ಕೇಸ್‌ ಹಾಕಲಾಗುತ್ತದೆ. ದಂಡ ಕಟ್ಟಿಲ್ಲ ಅಂದರೆ ಕೋರ್ಟ್‌ಗೆ ಹಾಜರುಪಡಿಸಲಾಗು ವುದು. ವಶಕ್ಕೆ ಪಡೆದಿರುವ ಎರಡು ಬೈಕ್‌ಗಳ ಮೇಲೆ ತಲಾ ಒಂದೂವರೆ ಲಕ್ಷ ರೂ. ದಂಡವಿದೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next