Advertisement

ನಗರದಲ್ಲಿ ಗತ ವೈಭವ ಮೆರೆದ ವಿಂಟೇಜ್‌ ಕಾರ್‌ ರ್ಯಾಲಿ

12:43 PM Oct 01, 2018 | |

ಬೆಂಗಳೂರು: ರಾಜ ಮಹಾರಾಜರು ಸವಾರಿ ಮಾಡಿದ್ದ ಗಣ್ಯಾತೀಗಣ್ಯರು ಓಡಾಡಿದ್ದ  ದೇಶ- ವಿದೇಶದ ಸುಮಾರು 50 ವಿಂಟೇಜ್‌ ಕಾರುಗಳು ದಸರಾ ಪ್ರಯುಕ್ತ ರ್ಯಾಲಿ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ತೆರಳಿದವು. ಭಾರತದ ಕಾರುಗಳ ಒಕ್ಕೂಟ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿಟೇಜ್‌ ಕಾರು ರ್ಯಾಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು.

Advertisement

19ನೇ ಶತಮಾನದ ಸುಮಾರು 50ಕ್ಕೂ ಅಧಿಕ ಕಾರುಗಳ ಮಾಲೀಕರು, ಕುಟುಂಬ ಸಮೇತವಾಗಿ ಹಳೆಯ ಹಾಗೂ ಐತಿಹಾಸಿಕ ರಾಯಲ್‌ ಕ್ಲಾಸಿಕಲ್‌ ಕಾರ್‌ ಡ್ರೈವ್‌ ಟು ಮೈಸೂರು ರ್ಯಾಲಿಯಲ್ಲಿ ಸಂಭ್ರಮದಿಂದ ಭಾಗಿಯಾದರು. ಕರ್ನಾಟಕದ ಕಾರುಗಳು ಮಾತ್ರವಲ್ಲದೇ ಇಂಗ್ಲೆಂಡ್‌, ಫ್ರಾನ್ಸ್‌, ಶ್ರೀಲಂಕದಿಂದಲೂ ಕಾರುಗಳು ಬಂದಿದ್ದವು. ರಾಜ್ಯದ 16, ದೇಶದ ವಿವಿಧ ಭಾಗದ 22 ಕಾರು, ಶ್ರೀಲಂಕದ 9, ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ತಲಾ ಒಂದೊಂದು ಕಾರು ರ್ಯಾಲಿಯಲ್ಲಿತ್ತು.

ಲಂಡನ್‌ನಿಂದ ಪ್ಯಾಟ್ರಿಕ್‌ ರೋಲೇ ದಂಪತಿಗಳು ತಂದಿದ್ದ 1922 ಮಾಡೆಲ್‌ನ ವಿಂಟೇಜ್‌ ಕಾರು ಹಾಗೂ 1928ರಲ್ಲಿ ಮೋತಿಲಾಲ್‌ ನೆಹರು ಅವರು ಬಳಸಿದ್ದ ಕಾರು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮೋತಿಲಾಲ್‌ ನೆಹರು ಅವರು ಬಳಸಿದ್ದ ಕಾರ್‌ನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುಳಿತು ವಿಧಾನಸೌಧ ಸುತ್ತು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next